×
Ad

ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಮೃತ್ಯು : ವರದಿ

Update: 2025-11-04 21:48 IST

ಸಾಂದರ್ಭಿಕ ಚಿತ್ರ | Photo : aljazeera.com

ಜೆರುಸಲೇಂ, ನ.4: ದಕ್ಷಿಣ ಲೆಬನಾನ್ ಮೇಲೆ ಸೋಮವಾರ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ `ರದ್ವಾನ್ ಪಡೆ'ಯ ಕಮಾಂಡರ್ ಮುಹಮ್ಮದ್ ಅಲಿ ಹದೀದ್ ಸೇರಿದಂತೆ ಹಿಜ್ಬುಲ್ಲಾದ ಇಬ್ಬರು ಪ್ರಮುಖರು ಮೃತಪಟ್ಟಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.

`ದಕ್ಷಿಣ ಲೆಬನಾನ್‍ನ ನಬಾತಿಯೆಹ್ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ರದ್ವಾನ್ ಪಡೆಯ ಕಮಾಂಡರ್ ಹದೀದ್‍ನನ್ನು ಹತ್ಯೆ ಮಾಡಲಾಗಿದೆ. ಹದೀದ್ ಇಸ್ರೇಲ್ ವಿರುದ್ಧ ಹಲವಾರು ದಾಳಿಗಳನ್ನು ಮುನ್ನಡೆಸಿದ್ದ ಮತ್ತು ಹಿಜ್ಬುಲ್ಲಾ ಭಯೋತ್ಪಾದಕ ಮೂಲಸೌಕರ್ಯವನ್ನು ಮರುಸ್ಥಾಪಿಸಲು ಕೆಲಸ ಮಾಡಿದ್ದ. ಅಯ್ತಾ ಅಶ್‍ಶಾಬ್ ಪ್ರದೇಶದಲ್ಲಿ ನಡೆಸಿದ ಮತ್ತೊಂದು ದಾಳಿಯಲ್ಲಿ ಮತ್ತೊಬ್ಬ ಹಿಜ್ಬುಲ್ಲಾ ಸದಸ್ಯ ಹತನಾಗಿದ್ದು ಈತ ಇಸ್ರೇಲ್ ರಕ್ಷಣಾ ಪಡೆಗಳ ಕುರಿತ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ ' ಎಂದು ಇಸ್ರೇಲ್ ರಕ್ಷಣಾ ಇಲಾಖೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News