×
Ad

ಹಿಜ್ಬುಲ್ಲಾದ ರಾಕೆಟ್ ದಾಳಿ : ಇಸ್ರೇಲ್ನ.ಲ್ಲಿ ಇಬ್ಬರು ಮೃತ್ಯು

Update: 2024-10-09 21:46 IST

ಸಾಂದರ್ಭಿಕ ಚಿತ್ರ (PTI)

ಜೆರುಸಲೇಂ : ಉತ್ತರ ಇಸ್ರೇಲ್ನಾ ಕಿರ್ಯಾ ಶಮೊನ ನಗರವನ್ನು ಗುರಿಯಾಗಿಸಿ ಲೆಬನಾನ್ನಿಂುದ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ಇಸ್ರೇಲ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಲೆಬನಾನ್ನಿಂಿದ ಕನಿಷ್ಠ 40 ರಾಕೆಟ್ಗಳಳನ್ನು ಪ್ರಯೋಗಿಸಲಾಗಿದೆ. ಇದರಲ್ಲಿ ಕೆಲವನ್ನು ಹೊಡೆದುರುಳಿಸಲಾಗಿದೆ. ಕಿರ್ಯಾ ಶಮೊನ ನಗರದಲ್ಲಿ ವ್ಯಕ್ತಿ ಹಾಗೂ ಮಹಿಳೆ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಇಸ್ರೇಲ್-ಲೆಬನಾನ್ ಗಡಿಭಾಗದಲ್ಲಿ ಒಳ ನುಗ್ಗುತ್ತಿದ್ದ ಇಸ್ರೇಲ್ ತುಕಡಿಯನ್ನು ಹಿಮ್ಮೆಟ್ಟಿಸಲಾಗಿದೆ. ಗಡಿ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಲ್ಯಾಬೌನೆ ಗ್ರಾಮದ ಬಳಿ ಇಸ್ರೇಲ್ ಯೋಧರ ಮೇಲೆ ಹಲವಾರು ರಾಕೆಟ್ಗದಳನ್ನು ಪ್ರಯೋಗಿಸಲಾಗಿದೆ. ಪೂರ್ವದ ಮಯಿಸ್ ಅಲ್-ಜಬಾಲ್ ಮತ್ತು ಮೌಹೈಬಿಬ್ ನಗರಗಳತ್ತ ನುಗುತ್ತಿದ್ದ ಇಸ್ರೇಲ್ ಯೋಧರನ್ನು ಸರಣಿ ರಾಕೆಟ್ ದಾಳಿಗಳ ಮೂಲಕ ಹಿಮ್ಮೆಟ್ಟಿಸಲಾಗಿದೆ ಎಂದು ಹಿಜ್ಬುಲ್ಲಾ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News