×
Ad

ಹಾರ್ಮುಝ್‌ |ಅಮೆರಿಕದ ದಿಗ್ಬಂಧನ ವಲಯದಿಂದ ಹೊರಬಂದ ಇರಾನ್‍ನ ಟ್ಯಾಂಕರ್‌ಗಳು

Update: 2026-06-17 20:50 IST

Photo Credit : AP

ಟೆಹರಾನ್, ಜೂ.17: ಸುಮಾರು 2 ತಿಂಗಳ ಬಿಕ್ಕಟ್ಟಿನ ನಂತರ, ಇರಾನ್‍ನ ತೈಲವನ್ನು ಹೊತ್ತ ಮೊದಲ ಟ್ಯಾಂಕರ್‌ಗಳು ಹಾರ್ಮುಝ್‌ ಜಲಸಂಧಿಯಲ್ಲಿದ್ದ ಅಮೆರಿಕ ದಿಗ್ಬಂಧನದಿಂದ ಹೊರಬಂದಿವೆ ಎಂದು `ಟ್ಯಾಂಕರ್ ಟ್ರ್ಯಾಕರ್ಸ್' ವೆಬ್‍ಸೈಟ್ ಬುಧವಾರ ವರದಿ ಮಾಡಿವೆ.

ಕನಿಷ್ಠ ಎರಡು ಸೂಪರ್ ಟ್ಯಾಂಕರ್‌ಗಳು ಅಮೆರಿಕ ನೌಕಾಪಡೆಯ ದಿಗ್ಬಂಧನ ವಲಯದಿಂದ ಹೊರಬಂದಿವೆ. ಇವೆರಡೂ ಒಟ್ಟು 3.8 ಮಿಲಿಯನ್ ಬ್ಯಾರೆಲ್ ಇರಾನಿನ ಕಚ್ಚಾ ತೈಲವನ್ನು ಹೊತ್ತೊಯ್ಯುತ್ತಿವೆ. ಬಳಿಕ ಮೂರನೇ ಟ್ಯಾಂಕರ್ ಕೂಡ ಹೊರಬಂದಿದೆ ಎಂದು ಟ್ಯಾಂಕರ್ ಟ್ರ್ಯಾಕರ್ಸ್ `ಎಕ್ಸ್'ನಲ್ಲಿ ತಿಳಿಸಿದೆ. ತೈಲ ಸಾಗಣೆ ಮತ್ತು ದಾಸ್ತಾನುಗಳನ್ನು ಮೇಲ್ವಿಚಾರಣೆ ಮಾಡುವ 'ಟ್ಯಾಂಕರ್ ಟ್ರ್ಯಾಕರ್ಸ್' ವೆಬ್‍ಸೈಟ್, ಉಪಗ್ರಹ ಚಿತ್ರಗಳ ಮೂಲಕ ದೃಢೀಕರಿಸಲ್ಪಟ್ಟ ಡಿಜಿಟಲ್ ಟ್ರ್ಯಾಕಿಂಗ್ ಡೇಟಾವನ್ನು ಉಲ್ಲೇಖಿಸಿ ಈ ವರದಿ ಮಾಡಿದೆ.

ಸ್ವಿಟ್ಜಲೆರ್ಂಡ್‍ನಲ್ಲಿ ನಡೆಯಲಿರುವ ಸಹಿ ಹಾಕುವ ಸಮಾರಂಭದ ಬೆನ್ನಲ್ಲೇ ಅಂತಿಮ ಒಪ್ಪಂದದ ಕುರಿತು ಮಾತುಕತೆಗಳು ಪ್ರಾರಂಭವಾಗಲಿವೆ. ಸಹಿ ಹಾಕಿದ ತಕ್ಷಣವೇ ತೈಲ ಮಾರಾಟದ ಮೇಲಿನ ನಿರ್ಬಂಧಗಳ ವಿನಾಯಿತಿ ಜಾರಿಗೆ ಬರಲಿದ್ದು, ಬ್ಯಾಂಕಿಂಗ್, ಸಾರಿಗೆ ಮತ್ತು ವಿಮೆ ಮುಂತಾದ ಸೇವೆಗಳನ್ನೂ ಇದು ಒಳಗೊಂಡಿರುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ `ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News