ಇಸ್ರೇಲ್ ಹಡಗಿನ ಮೇಲೆ ಹೌದಿಗಳ ಕ್ಷಿಪಣಿ ದಾಳಿ
Update: 2024-07-15 21:27 IST
PC : NDTV
ಸನಾ: ಏಡನ್ ಕೊಲ್ಲಿ ಮತ್ತು ಇಸ್ರೇಲ್‍ನ ದಕ್ಷಿಣ ತುದಿಯಲ್ಲಿರುವ ಐಲಾಟ್‍ನಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಸ್ರೇಲ್‍ನ ಹಡಗಿನ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್ ಮೂಲದ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.
ಇಸ್ರೇಲ್‍ನ ಹಡಗು ಎಂಎಸ್‍ಸಿ ಯುನಿಫಿಕ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆದಿದ್ದು ಹಡಗಿಗೆ ಹಾನಿಯಾಗಿದೆ. ಯೆಮನ್‍ನಲ್ಲಿ ಕಾರ್ಯಾಚರಿಸುತ್ತಿದ್ದ ಇಸ್ರೇಲ್-ಅಮೆರಿಕನ್ ಗೂಢಚರ್ಯೆ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದು ಹೌದಿಗಳ ವಕ್ತಾರರು ಮಾಹಿತಿ ನೀಡಿದ್ದಾರೆ.