×
Ad

ಗಾಝಾ |ಇಸ್ರೇಲ್ ದಾಳಿ ; 33 ಫೆಲೆಸ್ತೀನೀಯರ ಮೃತ್ಯು

Update: 2024-09-03 22:17 IST

PC : PTI 

ಗಾಝಾ : ಗಾಝಾದ್ಯಂತ ಕಳೆದ 24 ಗಂಟೆಯಲ್ಲಿ ಇಸ್ರೇಲ್ ಪಡೆಗಳ ದಾಳಿಯಲ್ಲಿ 33 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಈ ಮಧ್ಯೆ, ವಿಶ್ವಸಂಸ್ಥೆಯ ನೇತೃತ್ವದಲ್ಲಿ ಗಾಝಾದಲ್ಲಿ ನಡೆಯುತ್ತಿರುವ ಪೋಲಿಯೊ ಲಸಿಕೆ ಅಭಿಯಾನ ಮೂರನೇ ದಿನವೂ ಸುಸೂತ್ರವಾಗಿ ನಡೆದಿದೆ ಎಂದು ವರದಿಯಾಗಿದೆ. ಅಭಿಯಾನದ ಆರಂಭದ ಎರಡು ದಿನಗಳಲ್ಲಿ ಗಾಝಾದ 10 ವರ್ಷದೊಳಗಿನ 1,61,000ಕ್ಕೂ ಅಧಿಕ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೇಳಿದ್ದಾರೆ.

ದಕ್ಷಿಣ ಗಾಝಾ ನಗರ ರಫಾದಲ್ಲಿ ಇಸ್ರೇಲ್ ದಾಳಿಯಲ್ಲಿ 4 ಮಹಿಳೆಯರು ಮೃತಪಟ್ಟಿದ್ದರೆ, ಉತ್ತರ ಗಾಝಾದ ಗಾಝಾ ನಗರದಲ್ಲಿ ಆಸ್ಪತ್ರೆಯ ಬಳಿ ನಡೆದ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಗಾಝಾದ್ಯಂತ ನಡೆದ ಪ್ರತ್ಯೇಕ ದಾಳಿಗಳಲ್ಲಿ 21 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ನಾಗರಿಕ ತುರ್ತು ಸೇವಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಗಾಝಾದಲ್ಲಿ ನಡೆಸಿದ ದಾಳಿಯಲ್ಲಿ ಹಮಾಸ್‍ನ ಹಿರಿಯ ಕಮಾಂಡರ್ ಅಹ್ಮದ್ ಫೋಜಿ ನಾಸಿರ್ ಮುಹಮ್ಮದ್ ವಾಡಿಯಾ ಸೇರಿದಂತೆ 8 ಹಮಾಸ್ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News