×
Ad

ಹಮಾಸ್ ದಾಳಿ ತಡೆಯಲು ವಿಫಲ | ಇಸ್ರೇಲ್ ಗುಪ್ತಚರ ಮುಖ್ಯಸ್ಥ ರಾಜೀನಾಮೆ

Update: 2024-09-13 21:33 IST

PC : IANS

ಜೆರುಸಲೆಂ : ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ತಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಗಣ್ಯ ಗುಪ್ತಚರ ಘಟಕದ ಮುಖ್ಯಸ್ಥರು ರಾಜೀನಾಮೆ ನೀಡಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಹಮಾಸ್ ದಾಳಿ ತಡೆಯುವಲ್ಲಿನ ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ 8200 ಯುನಿಟ್‍ನ ಕಮಾಂಡರ್ ಬ್ರಿಗೇಡಿಯರ್ ಜನರಲ್ ಯೋಸ್ಸಿ ಸಾರಿಯಲ್ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅವರ ಸೇವೆ ಅಂತ್ಯಗೊಳ್ಳಲಿದೆ ಎಂದು ಸೇನೆಯ ಹೇಳಿಕೆ ತಿಳಿಸಿದೆ. ಸಾರಿಯಲ್ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಇಸ್ರೇಲ್ ಮಾಧ್ಯಮಗಳು ಗುರುವಾರ ಪ್ರಸಾರ ಮಾಡಿವೆ.

`ತನಗೆ ವಹಿಸಲಾದ ಹೊಣೆಯನ್ನು ಈಡೇರಿಸಲು ವಿಫಲವಾಗಿರುವುದಕ್ಕೆ ಕ್ಷಮೆ ಯಾಚಿಸುವುದಾಗಿ' ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಷ್ಠಿತ ಮತ್ತು ರಹಸ್ಯ ಸೇವೆಗಳ ಘಟಕವಾಗಿರುವ ಯುನಿಟ್ 8200 ಗುಪ್ತ ಸಂಕೇತಗಳನ್ನು ಭೇದಿಸುವ ಮತ್ತು ವಿಶ್ಲೇಷಿಸುವ ಉಸ್ತುವಾರಿಯನ್ನು ಹೊಂದಿದೆ. ಅಕ್ಟೋಬರ್ 7ರಂದು ನಡೆದ ದಾಳಿಯು ಇಸ್ರೇಲ್ ಮಿಲಿಟರಿ ಗುಪ್ತಚರ ಪ್ರಾಧಿಕಾರವು ಬಿಕ್ಕಟ್ಟಿಗೆ ಸಿಲುಕಿದ್ದು ಅದರ ಕಮಾಂಡರ್ ಮೇಜರ್ ಜನರಲ್ ಅಹರಾನ್ ಹಾಲಿವಾ 2024ರ ಎಪ್ರಿಲ್‍ನಲ್ಲಿ ರಾಜೀನಾಮೆ ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News