×
Ad

ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸಹಿತ 5 ಮಂದಿ ಸಾವು

Update: 2024-07-19 21:19 IST

ಬೈರೂತ್: ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪಿನ ಹಿರಿಯ ಕಮಾಂಡರ್ ಸಹಿತ ಐದು ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ದಕ್ಷಿಣ ಲೆಬನಾನ್ನ ಗ್ರಾಮವೊಂದರ ಮನೆಯ ಬಳಿ ಕ್ಷಿಪಣಿ ಅಪ್ಪಳಿಸಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹಿರಿಯ ಕಮಾಂಡರ್ ಅಲಿ ಜಾಫರ್ ಮಾತೌಕ್ ಸಹಿತ ಇಬ್ಬರು ಹಿಜ್ಬುಲ್ಲಾ ಯೋಧರು ಸೇರಿದ್ದು ದಾಳಿಯಲ್ಲಿ ಇತರ 7 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ನ ಭದ್ರತಾ ಮೂಲಗಳು ವರದಿ ಮಾಡಿವೆ. ದಕ್ಷಿಣ ಲೆಬನಾನ್ನ ಮನೆಯಲ್ಲಿ ಹಿಜ್ಬುಲ್ಲಾ ಕಮಾಂಡ್ ಸೆಂಟರ್ ಕಾರ್ಯನಿರ್ವಹಿಸುತ್ತಿರುವ ಖಚಿತ ಮಾಹಿತಿಯನ್ನು ಆಧರಿಸಿ ದಾಳಿ ನಡೆದಿದ್ದು ಮೃತರಲ್ಲಿ ಅಲಿ ಜಾಫರ್ ಮಾತೌಕ್ ಸಹಿತ ಇಬ್ಬರು ಹಿಜ್ಬುಲ್ಲಾ ಸದಸ್ಯರು ಸೇರಿದ್ದಾರೆ. ಖನಾ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಹಿಜ್ಬುಲ್ಲಾದ ಮತ್ತೊಬ್ಬ ಕಮಾಂಡರ್ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಪೂರ್ವದ ಬೆಕಾ ಕಣಿವೆಯಲ್ಲಿ ಇಸ್ರೇಲ್ನ ಡ್ರೋನ್ ದಾಳಿಯಲ್ಲಿ ಕಮಾಂಡರ್ ಮುಹಮ್ಮದ್ ಜಬಾರಾ ಮೃತಪಟ್ಟಿರುವುದಾಗಿ ಹಿಜ್ಬುಲ್ಲಾ ಮೂಲಗಳು ಹೇಳಿವೆ. ಇಸ್ರೇಲ್ ವಿರುದ್ಧದ ಭಯೋತ್ಪಾದಕ ದಾಳಿ ಮತ್ತು ಡ್ರೋನ್ ದಾಳಿಯ ಸೂತ್ರಧಾರ ಜಬಾರಾನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News