ಝೊಹ್ರಾನ್ ಮಮ್ದಾನಿ ಗೆದ್ದರೆ ನ್ಯೂಯಾರ್ಕ್ ಆರ್ಥಿಕ ವಿಪತ್ತಿಗೆ ಸಿಲುಕಲಿದೆ : ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್, ನ.4: ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಯ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ `ಕಮ್ಯುನಿಸ್ಟ್' ಆಗಿದ್ದು ಒಂದು ವೇಳೆ ಅವರು ಮೇಯರ್ ಆಗಿ ಆಯ್ಕೆಗೊಂಡರೆ ನ್ಯೂಯಾರ್ಕ್‍ಗೆ ಫೆಡರಲ್ ಅನುದಾನ ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
`ಒಂದು ವೇಳೆ ಕಮ್ಯುನಿಸ್ಟ್ ಅಭ್ಯರ್ಥಿ ಝೊಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆದ್ದರೆ ನನ್ನ ಅಚ್ಚುಮೆಚ್ಚಿನ ನಗರ ನ್ಯೂಯಾರ್ಕ್‍ಗೆ ಫೆಡರಲ್ ಅನುದಾನ ದೊರಕುವುದಿಲ್ಲ. ಮಮ್ದಾನಿಯ ನಾಯಕತ್ವದಡಿ ನ್ಯೂಯಾರ್ಕ್ ನಗರವು ಯಶಸ್ಸಿನ ಅಥವಾ ಬದುಕುಳಿಯುವ ಶೂನ್ಯ ಅವಕಾಶವನ್ನು ಹೊಂದಿದೆ. ಕಮ್ಯುನಿಸ್ಟ್ ಚುಕ್ಕಾಣಿ ಹಿಡಿದಾಗ ಇದು ಮತ್ತಷ್ಟು ಹದಗೆಡಬಹುದು. ಅಮೂಲ್ಯ ಹಣವನ್ನು ಕೆಟ್ಟ ವಿಷಯಕ್ಕೆ ರವಾನಿಸಲು ನನಗೆ ಇಷ್ಟವಿಲ್ಲ. ರಾಷ್ಟ್ರವನ್ನು ನಡೆಸುವುದು ನನ್ನ ಬಾಧ್ಯತೆಯಾಗಿದೆ ಮತ್ತು ಮಮ್ದಾನಿ ಗೆದ್ದರೆ ನ್ಯೂಯಾರ್ಕ್ ನಗರವು ಸಂಪೂರ್ಣ ಸಾಮಾಜಿಕ ಮತ್ತು ಆರ್ಥಿಕ ವಿಪತ್ತಿಗೆ ಸಿಲುಕಲಿದೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.