ನಿಜ್ಜಾರ್ ಹತ್ಯೆ ಆರೋಪಿಗಳನ್ನು ಕೋರ್ಟ್‍ಗೆ ಹಾಜರುಪಡಿಸುವಾಗ ಖಾಲಿಸ್ತಾನ್ ಪರ ಪ್ರತಿಭಟನೆ

Update: 2024-05-08 17:18 GMT
PC ; NDTV

ಟೊರಂಟೊ: ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದ ಆರೋಪಿಗಳಾದ ಮೂವರು ಭಾರತೀಯ ಪ್ರಜೆಗಳನ್ನು ಮಂಗಳವಾರ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತದ ಸರ್ರೆ ಪ್ರಾಂತೀಯ ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ನ್ಯಾಯಾಲಯದ ಹೊರಗೆ ಖಾಲಿಸ್ತಾನ್ ಧ್ವಜಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗಿದೆ.

ನ್ಯಾಯಾಲಯದ ಹೊರಗೆ ಸೇರಿದ್ದ ನೂರಾರು ಪ್ರತಿಭಟನಾಕಾರರು ನಿಜ್ಜಾರ್‍ನನ್ನು ಗೌರವಿಸುವ ಬ್ಯಾನರ್ ಹಿಡಿದುಕೊಂಡು ಖಾಲಿಸ್ತಾನ್ ಧ್ವಜವನ್ನು ಪ್ರದರ್ಶಿಸಿದರು. ನ್ಯಾಯಾಲಯದ ಒಳಗೆ ಪ್ರತ್ಯೇಕ ಕೋಣೆಯಲ್ಲಿ ಸುಮಾರು 50 ಮಂದಿ ಪ್ರಕರಣದ ಸಾಕ್ಷಿದಾರರು ಸೇರಿದ್ದರು. ಶುಕ್ರವಾರ ಬಂಧಿಸಲ್ಪಟ್ಟಿದ್ದ ಕರಣ್ ಬ್ರಾರ್, ಕಮಲ್‍ಪ್ರೀತ್ ಸಿಂಗ್ ಮತ್ತು ಕರಣ್‍ಪ್ರೀತ್ ಸಿಂಗ್‍ರನ್ನು ಪ್ರತ್ಯೇಕವಾಗಿ ನ್ಯಾಯಾಲಯದ ಎದುರು ಹಾಜರುಪಡಿಸಿದ ಬಳಿಕ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಲಾಗಿದೆ. ಆರೋಪಿಗಳಿಗೆ ತಮ್ಮ ವಕೀಲರ ಸಲಹೆ ಪಡೆಯಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯದ ಮೂಲಗಳನ್ನು ಉಲ್ಲೇಖಿಸಿ `ವ್ಯಾಂಕೋವರ್ ಸನ್' ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News