ಇಮ್ರಾನ್‍ಖಾನ್ ಪತ್ನಿ ಗೃಹಬಂಧನದಿಂದ ಜೈಲಿಗೆ ಸ್ಥಳಾಂತರ

Update: 2024-05-08 17:54 GMT

ಸಾಂದರ್ಭಿಕ ಚಿತ್ರ | Photo: NDTV

ಇಸ್ಲಮಾಬಾದ್: ಭದ್ರತೆಯ ಕಾರಣಕ್ಕಾಗಿ ತನ್ನನ್ನು ಗೃಹಬಂಧನದಿಂದ ಜೈಲಿಗೆ ಸ್ಥಳಾಂತರಿಸಲು ಸೂಚಿಸಬೇಕೆಂದು ಇಮ್ರಾನ್‍ಖಾನ್ ಅವರ ಪತ್ನಿ ಬುಷ್ರಾ ಬೀಬಿ ಸಲ್ಲಿಸಿದ್ದ ಅರ್ಜಿಯನ್ನು ಪಾಕಿಸ್ತಾನದ ನ್ಯಾಯಾಲಯವೊಂದು ಪುರಸ್ಕರಿಸಿದೆ ಎಂದು ವಕೀಲರು ಹೇಳಿದ್ದಾರೆ.

ತೋಷಖಾನಾ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಬುಷ್ರಾ ಬೀಬಿಯನ್ನು ಜನವರಿಯಿಂದಲೂ ಇಸ್ಲಮಾಬಾದ್‍ನ `ಹಿಲ್‍ಟಾಪ್ ಮಾನ್ಷನ್'ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಮನೆಯಲ್ಲಿ ಸಬ್‍ಜೈಲ್ ಎಂದು ಸರಕಾರ ಘೋಷಿಸಿತ್ತು. ಇಲ್ಲಿ ತನಗೆ ಸೂಕ್ತ ಭದ್ರತೆ ಒದಗಿಸಿಲ್ಲ ಮತ್ತು ವಿಷಾಹಾರವನ್ನು ಒದಗಿಸಲಾಗಿದೆ ಎಂದು ಬುಷ್ರಾ ಬೀಬಿ ಆರೋಪಿಸಿದ್ದರು ಮತ್ತು ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಇಸ್ಲಮಾಬಾದ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬುಷ್ರಾ ಬೀಬಿಯನ್ನು ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿರುವ ಅಡ್ಯಾಲಾ ಜೈಲಿಗೆ ಸ್ಥಳಾಂತರಿಸುವಂತೆ ಸರಕಾರಕ್ಕೆ ಆದೇಶಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News