Pakistan | 6 ಭದ್ರತಾ ಸಿಬ್ಬಂದಿ ಹತ್ಯೆ; 8 ಸಿಬ್ಬಂದಿಗಳ ಅಪಹರಣ
Update: 2026-06-09 23:10 IST
ಸಾಂದರ್ಭಿಕ ಚಿತ್ರ | Photo Credit : NDTV
ಪೇಷಾವರ, ಜು.9: ವಾಯವ್ಯ ಪಾಕಿಸ್ತಾನದ ಚೆಕ್ಪಾರಯಿಂಟ್ನಸಲ್ಲಿ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(TTP) ಗುಂಪಿನ ಸದಸ್ಯರು ಅರೆಸೇನಾ ಪಡೆಯ 6 ಸಿಬ್ಬಂದಿಗಳನ್ನು ಹತ್ಯೆಮಾಡಿ 8 ಸಿಬ್ಬಂದಿಗಳನ್ನು ಅಪಹರಿಸಿರುವುದಾಗಿ ಭದ್ರತಾ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಟಿಟಿಪಿಯ ಹತ್ತಕ್ಕೂ ಹೆಚ್ಚು ಸದಸ್ಯರು ಪೇಷಾವರ ನಗರದ ಚೆಕ್ಪಾರಯಿಂಟ್ ಗೆ ಬಂದೂಕು, ಹ್ಯಾಂಡ್ ಗ್ರೆನೇಡ್ಗಗಳು ಹಾಗೂ ಮಾರ್ಟರ್ ಶೆಲ್ಗಾಳೊಂದಿಗೆ ದಾಳಿ ನಡೆಸಿದರು. ದಾಳಿಯಲ್ಲಿ 6 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು ಇತರ 4 ಸಿಬ್ಬಂದಿ ಗಾಯಗೊಂಡಿದ್ದಾರೆ. ಬಳಿಕ 8 ಸಿಬ್ಬಂದಿಗಳನ್ನು ಅಜ್ಞಾತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿಬ ಸುದ್ದಿಸಂಸ್ಥೆ ವರದಿ ಮಾಡಿದೆ.