ಅಫ್ಘಾನ್ ಗಡಿ ಬಳಿ ಆತ್ಮಹತ್ಯಾ ದಾಳಿ: ಪಾಕಿಸ್ತಾನದ 7 ಯೋಧರ ಸಾವು
Update: 2025-10-17 20:22 IST
Photo Credi : NDTV
ಇಸ್ಲಾಮಾಬಾದ್, ಅ.17: ಅಫ್ಘಾನಿಸ್ತಾನದ ಗಡಿಯ ಬಳಿ ಶುಕ್ರವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ 7 ಯೋಧರು ಸಾವನ್ನಪ್ಪಿರುವುದಾಗಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ವಝೀರಿಸ್ತಾನದ ಮಿಲಿಟರಿ ಕ್ಯಾಂಪ್‍ನ ಮೇಲೆ ನಡೆದ ದಾಳಿಯಲ್ಲಿ 7 ಯೋಧರು ಸಾವನ್ನಪ್ಪಿದ್ದು ಇತರ 13 ಯೋಧರು ಗಾಯಗೊಂಡಿದ್ದಾರೆ. ಸ್ಫೋಟಕ ತುಂಬಿದ್ದ ವಾಹನವನ್ನು ಕ್ಯಾಂಪ್ ನ ಆವರಣ ಗೋಡೆಗೆ ಅಪ್ಪಳಿಸಿದಾಗ ಸ್ಫೋಟ ಸಂಭವಿಸಿದೆ. ಬಳಿಕ ಇತರ ಇಬ್ಬರು ಉಗ್ರರು ಕ್ಯಾಂಪ್‍ನ ಆವರಣ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಸಾವು-ನೋವು ಸಂಭವಿಸಿದೆ. ಇಬ್ಬರು ಉಗ್ರರನ್ನು ಭದ್ರತಾ ಪಡೆ ಹತ್ಯೆಗೈದಿರುವುದಾಗಿ ವರದಿಯಾಗಿದೆ.