×
Ad

ಇಸ್ರೇಲ್ ವಿರುದ್ಧ ಪ್ರತೀಕಾರ ದಾಳಿ ನಿಶ್ಚಿತ : ಇರಾನ್

Update: 2024-08-26 21:14 IST

PC : NDTV

ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಲು ಇರಾನ್ ಬಯಸುವುದಿಲ್ಲ. ಆದರೆ ಟೆಹ್ರಾನ್ನ ಲ್ಲಿ ಹಮಾಸ್ ವರಿಷ್ಠ ನಾಯಕ ಇಸ್ಮಾಯಿಲ್ ಹಾನಿಯೆಹ್ ಅವರ ಹತ್ಯೆಗೆ ಪ್ರತೀಕಾರ ದಾಳಿ ನಿಶ್ಚಿತ ಎಂದು ಇರಾನ್ ಹೇಳಿದೆ.

ಹಾನಿಯೆಹ್ ಹತ್ಯೆಗೆ ಪ್ರತೀಕಾರ ದಾಳಿ ನಿಶ್ಚಿತವಾಗಿದೆ ಮತ್ತು ಲೆಕ್ಕಾಚಾರದ ರೀತಿಯಲ್ಲಿ ನಡೆಯಲಿದೆ. ಇರಾನ್ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ಆದರೆ ಇದಕ್ಕೆಲ್ಲಾ ಹೆದರುವುದೂ ಇಲ್ಲ ಎಂದು ಇರಾನ್ನರ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಹೇಳಿದ್ದಾರೆ.

ಇಸ್ಮಾಯಿಲ್ ಹಾನಿಯೆಹ್ ಹತ್ಯೆಗೆ ಇಸ್ರೇಲ್ ಹೊಣೆ ಎಂದು ಇರಾನ್ ದೂಷಿಸಿದ್ದು ಪ್ರತೀಕಾರ ದಾಳಿ ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News