ಉತ್ತರ ಉಕ್ರೇನ್ ನಗರ ಪ್ರವೇಶಿಸಿದ ರಶ್ಯ ಪಡೆಗಳು: ವರದಿ
Update: 2025-11-05 23:01 IST
ಮಾಸ್ಕೋ, ನ.5: ಉತ್ತರ ಉಕ್ರೇನ್ ನ ಆಯಕಟ್ಟಿನ ಪೊಕ್ರೋವ್ಸ್ಕ್ ನಗರದೊಳಗೆ ರಶ್ಯದ ಪಡೆಗಳು ಪ್ರವೇಶಿಸಿದ್ದು ನಗರದೊಳಗಿದ್ದ ಉಕ್ರೇನ್ ನ ಪಡೆಗಳು ಹಿಮ್ಮೆಟ್ಟಿವೆ ಎಂದು ರಶ್ಯ ಬುಧವಾರ ಹೇಳಿದೆ.
ಅತ್ಯಂತ ಆಯಕಟ್ಟಿನ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಅತೀ ಪ್ರಮುಖ ನಗರವಾದ ಪೊಕ್ರೋವ್ಸ್ಕ್ನಲ್ಲಿ ತನ್ನ ಪಡೆಗಳಿಗೆ ಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದು ಉಕ್ರೇನ್ ದೃಢಪಡಿಸಿದೆ. ಆದರೆ ತನ್ನ ಪಡೆ ನಗರದಿಂದ ಹಿಂದೆ ಸರಿಯುತ್ತಿಲ್ಲ ಎಂದು ಪ್ರತಿಪಾದಿಸಿದೆ. ಪೂರ್ವ ಉಕ್ರೇನ್ನ ಡೊನ್ಬಾಸ್ ಪ್ರಾಂತಕ್ಕೆ ಪ್ರವೇಶ ದ್ವಾರ ಎನಿಸಿರುವ ಈ ನಗರವನ್ನು ವಶಕ್ಕೆ ಪಡೆಯಲು ರಶ್ಯ ಸುಮಾರು ಒಂದು ವರ್ಷದಿಂದ ನಿರಂತರ ಪ್ರಯತ್ನ ಮುಂದುವರಿಸಿದೆ.