×
Ad

ಪೂರ್ವ ಕಾಂಗೋ: Ebola ಚಿಕಿತ್ಸಾ ಕೇಂದ್ರಕ್ಕೆ ಬೆಂಕಿ ಹಚ್ಚಿದ ಸ್ಥಳೀಯರು; 18 ಸೋಂಕಿತ ವ್ಯಕ್ತಿಗಳು ಪರಾರಿ

Update: 2026-05-24 22:31 IST

ಸಾಂದರ್ಭಿಕ ಚಿತ್ರ : gemini AI

ಬುನಿಯ, ಮೇ 24: ಎಬೋಲಾ ಸೋಂಕು ಉಲ್ಬಣಗೊಂಡಿರುವ ಪೂರ್ವ ಕಾಂಗೋದಲ್ಲಿ ಎಬೋಲಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಆರೋಗ್ಯ ಕೇಂದ್ರದ ಭಾಗವಾಗಿದ್ದ ಟೆಂಟ್‍ನ ಮೇಲೆ ಶನಿವಾರ ಸ್ಥಳೀಯ ನಾಗರಿಕರು ದಾಳಿ ನಡೆಸಿ ಬೆಂಕಿಹಚ್ಚಿರುವುದಾಗಿ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಒಂದು ವಾರದಲ್ಲಿ ನಡೆದಿರುವ ಎರಡನೇ ದಾಳಿ ಇದಾಗಿದೆ. ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ರೋಗಿಗಳು ಹೊರಗೆ ಓಡಿದ್ದು ಶಂಕಿತ ಎಬೋಲಾ ಸೋಂಕನ್ನು ಹೊಂದಿರುವ 18 ಜನರು ಶಿಬಿರದಿಂದ ಹೊರಗೆ ಹೋದವರ ಪತ್ತೆಯಿಲ್ಲ ಎಂದು ಸ್ಥಳೀಯ ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ. ಮೊಂಗ್‍ಬ್ವಲು ನಗರದಲ್ಲಿನ ಕ್ಲಿನಿಕ್‍ಗೆ ಆಕ್ರೋಶಿತ ಸ್ಥಳೀಯರು ಶುಕ್ರವಾರ ರಾತ್ರಿ ಆಗಮಿಸಿದ್ದು ಕ್ಲಿನಿಕ್‍ನ ಹೊರಗೆ ಶಂಕಿತ ಮತ್ತು ದೃಢೀಕೃತ ಎಬೋಲಾ ಪ್ರಕರಣಗಳಿಗೆ ಸ್ಥಾಪಿಸಲಾದ ಶಿಬಿರಕ್ಕೆ ಬೆಂಕಿ ಹಚ್ಚಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಭೀತಿಯನ್ನು ಉಂಟು ಮಾಡಿರುವ ಜೊತೆಗೆ 18 ಶಂಕಿತ ಸೋಂಕಿತರು ಪರಾರಿಯಾಗಲು ಕಾರಣವಾದ ಈ ಕೃತ್ಯವನ್ನು ಖಂಡಿಸುವುದಾಗಿ ಮೊಂಗ್‍ಬ್ವಾಲು ಆಸ್ಪತ್ರೆಯ ನಿರ್ದೇಶಕ ಡಾ. ರಿಚರ್ಡ್ ಲೊಕುಡಿ ಹೇಳಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಗುರುವಾರ, ರ್ವಂಪಾರ ನಗರದಲ್ಲಿ ಶಂಕಿತ ಎಬೋಲಾ ಸೋಂಕು ಪೀಡಿತ ವ್ಯಕ್ತಿ ಮೃತಪಟ್ಟ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲು ಅಧಿಕಾರಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಮತ್ತೊಂದು ಚಿಕಿತ್ಸಾ ಕೇಂದ್ರಕ್ಕೆ ಬೆಂಕಿ ಹಚ್ಚಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News