Afzalpur | ಸ್ಮಶಾನ ಭೂಮಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.19ರಂದು ಗೌರ (ಬಿ) ಗ್ರಾಮಸ್ಥರಿಂದ ಪ್ರತಿಭಟನೆ
ಅಫಜಲಪುರ: ತಾಲೂಕಿನ ಗೌರ (ಬಿ) ಗ್ರಾಮದಲ್ಲಿ ಸ್ಮಶಾನ ಭೂಮಿಯ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ನಾಳೆ ಗುರುವಾರ ತಹಶೀಲ್ದಾರ್ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಗ್ರಾಮದ ಸರ್ವೆ ನಂ. 145ರಲ್ಲಿರುವ 34 ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿಟ್ಟು, ಅದರ ಅಳತೆ ಕಾರ್ಯ ಕೈಗೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಗ್ರಾಮದ ನಿವಾಸಿ ಶರಣು ದಿವಾಣಜಿ ಮಾತನಾಡಿ, ಗ್ರಾಮದಲ್ಲಿ ಸರ್ಕಾರಿ ಜಮೀನಿದ್ದು, ಸರ್ವೆ ನಂ. 145ರಲ್ಲಿರುವ 34 ಗುಂಟೆ ಜಮೀನಿನ ದಾಖಲೆಗಳ ಪ್ರತಿಗಳನ್ನು ಒದಗಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಮಶಾನ ಭೂಮಿಯನ್ನು ಗುರುತಿಸಿ, ಅಧಿಕೃತವಾಗಿ ಅಳತೆ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಸ್ಮಶಾನ ಭೂಮಿಯ ಸಮಸ್ಯೆ ಹಲವು ದಿನಗಳಿಂದ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಮೀನಿನ ಅಳತೆ ಮಾಡಿಸಿ, ಸ್ಮಶಾನಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶರಣು ದಿವಾಣಜಿ, ಫಕೀರಪ್ಪ ನಿಂಬರ್ಗಿ, ಸಿದ್ದು ಗೌಡ ಪಾಟೀಲ್, ನಿಂಗಣ್ಣ ಗೌಡ ಪಾಟೀಲ್, ಮಲ್ಲಯ್ಯ ಗುತ್ತೇದಾರ, ಶ್ರೀಪತಿ ಭೂಸಿ, ಬಸವರಾಜ ಕಂಬಾರ, ಭೀಮಶಾ ನಾವಿ, ಶರಣಪ್ಪ ಪೂಜಾರಿ, ಬಸಯ್ಯ ಸ್ವಾಮಿ, ಹೊನ್ನಪ್ಪ ರಜಪೂತ, ಶ್ರೀಶೈಲ ಜಮಾದಾರ, ಬಾಬು ನಾಟಿಕಾರ, ಸಿದ್ದಪ್ಪ ಪ್ಯಾಟಿ, ಸುನಿಲ್ ದಪೇದಾರ, ನಾಗು ದಿಕ್ಸಂಗಿ, ನಿಂಗಣ್ಣ ದುದ್ದುಣಗಿ, ಶಿವು ನ್ಯಾವನೂರ, ಯಲ್ಲಪ್ಪ ಗಂಟೆ, ವಿಠ್ಠಲ್ ನಾಗರಳ್ಳಿ, ರವಿ ಪಾಟೀಲ, ಹೊನ್ನಪ್ಪ ಭೂಸಿ, ಶಿವಪ್ಪ ಭೂಸಿ, ಸತೀಶ ನಿಂಬರ್ಗಿ, ಉಮೇಶ್ ಗುತ್ತೇದಾರ, ಆಕಾಶ ಗುತ್ತೇದಾರ, ದೇವೇಂದ್ರ ದಿವಾಣಜಿ, ಮಹಾವೀರ ದಿವಾಣಜಿ, ಗೊರಖನಾಥ ನಾಟಿಕಾರ, ಗಾಂಧಿ ನಿಂಬರ್ಗಿ ಹಾಗೂ ರೇವಣಸಿದ್ಧ ಜಮಾದಾರ ಉಪಸ್ಥಿತರಿದ್ದರು.