×
Ad

ಕಲಬುರಗಿ-ವಾಸ್ಕೊ, ಕಲಬುರಗಿ-ಪಣಜಿ ಮಾರ್ಗದಲ್ಲಿ ಅಮೋಘವರ್ಷ ಸಾರಿಗೆ ಕಾರ್ಯಾಚರಣೆ

Update: 2025-10-24 18:59 IST

ಸಾಂದರ್ಭಿಕ ಚಿತ್ರ

ಕಲಬುರಗಿ: ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮೇರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-1 (ಕಲಬುರಗಿ ಘಟಕ-1)ರ ವತಿಯಿಂದ ಕಲಬುರಗಿಯಿಂದ ವಾಸ್ಕೊ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ಅ.25 ರಿಂದ ಕಲಬುರಗಿ-ವಾಸ್ಕೊ-ಕಲಬುರಗಿ ಹಾಗೂ ಕಲಬುರಗಿ-ಪಣಜಿ-ಕಲಬುರಗಿ ಮಾರ್ಗಗಳ ಮಧ್ಯದಲ್ಲಿ ಅಮೋಘವರ್ಷ (ನಾನ್ ಎಸಿ ಸ್ಲೀಪರ್) ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ-ವಾಸ್ಕೋ-ಕಲಬುರಗಿ:

ಈ ಬಸ್ಸು ಕಲಬುರಗಿ ಬಸ್ ನಿಲ್ದಾಣದಿಂದ ಸಂಜೆ 4.30 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6.30 ಗಂಟೆಗೆ ವಾಸ್ಕೋಗೆ ತಲುಪಲಿದೆ. ಅದೇ ರೀತಿ ಈ ಬಸ್ ವಾಸ್ಕೋ ಬಸ್ ನಿಲ್ದಾಣದಿಂದ ಸಂಜೆ 6.15 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.15 ಗಂಟೆಗೆ ಕಲಬುರಗಿಗೆ ತಲುಪಲಿದೆ. ಈ ಬಸ್ಸು ವ್ಹಾಯಾ: ಶಹಾಪೂರ, ಹುಣಸಗಿ, ತಾಳಿಕೋಟಿ, ಮುದ್ದೇಬಿಹಾಳ, ಬಾಗಲಕೋಟೆ, ಬೆಳಗಾವಿ, ಪೊಂಡಾ, ಮಡಗಾಂವ ಮಾರ್ಗವಾಗಿ ಸಂಚರಿಸಲಿದೆ.

ಕಲಬುರಗಿ-ಪಣಜಿ-ಕಲಬುರಗಿ :

ಈ ಬಸ್ಸು ಕಲಬುರಗಿ ಬಸ್ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 6.15 ಗಂಟೆಗೆ ಪಣಜಿಗೆ ತಲುಪಲಿದೆ. ಅದೇ ರೀತಿ ಈ ಬಸ್ ಸಂಜೆ 6 ಗಂಟೆಗೆ ಪಣಜಿ ಬಸ್ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 6.15 ಗಂಟೆಗೆ ಕಲಬುರಗಿಗೆ ತಲುಪಲಿದೆ. ಈ ಬಸ್ಸು ಅಫಜಲಪುರ, ಸಿಂದಗಿ, ವಿಜಯಪುರ, ಬೆಳಗಾವಿ, ಪೊಂಡಾ ಮಾರ್ಗವಾಗಿ ಸಂಚರಿಸಲಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News