×
Ad

ಹುಬ್ಬಳ್ಳಿ-ಪಂಢರಪುರ ನಡುವೆ ಆಷಾಡ ವಿಶೇಷ ರೈಲು

Update: 2025-06-27 17:45 IST

ಸಾಂದರ್ಭಿಕ ಚಿತ್ರ | PC : freepik

ಕಲಬುರಗಿ: ಆಷಾಡ ಮಾಸ ಹಿನ್ನೆಲೆಯಲ್ಲಿ ಪಂಢರಪುರಕ್ಕೆ ಹೋಗುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ-ಪಂಢರಪುರ ನಡುವೆ (14 ಟ್ರಿಪ್‍ಗಳಲ್ಲಿ) ಆಷಾಡ ವಿಶೇಷ ರೈಲು ಸಂಚರಿಸಲಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ-ಪಂಢರಪುರ ಕಾಯ್ದಿರಿಸದ ವಿಶೇಷ ರೈಲು (7 ಟ್ರಿಪ್‍ಗಳು) ರೈಲು ಸಂಖ್ಯೆ 07313) ಇದೇ ಜುಲೈ 1 ರಿಂದ 8 ರವರೆಗೆ ( ಜುಲೈ 4ರಂದು ಹೊರತುಪಡಿಸಿ) ಬೆಳಿಗ್ಗೆ 5.10 ಕ್ಕೆ ಹುಬ್ಬಳ್ಳಿಯಿಂದ ಹೊರಟು ಅದೇ ದಿನ ಸಂಜೆ 4 ಕ್ಕೆ ಪಂಢರಪುರ ತಲುಪಲಿದೆ. ಅದೇ ರೀತಿ ರೈಲು ಸಂಖ್ಯೆ 07314 ರೈಲು ಪಂಢರಪುರದಿಂದ ((7 ಟ್ರಿಪ್‍ಗಳು) ಜುಲೈ 1 ರಿಂದ 8 ರವರೆಗೆ ( ಜುಲೈ 4 ರಂದು ಹೊರತುಪಡಿಸಿ) ಸಂಜೆ 6 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

ಈ ರೈಲು ಧಾರವಾಡ, ಅಳ್ನಾವರ್, ಲೋಂಡಾ, ಖಾನಾಪುರ, ದೇಸೂರ್, ಬೆಳಗಾವಿ, ಪಾಚ್ಚಾಪುರ, ಗೋಕಾಕ ರಸ್ತೆ, ಘಟಪ್ರಭಾ, ಚಿಕ್ಕೋಡಿ ರಸ್ತೆ, ರಾಯಬಾಗ, ಚಿಂಚಲಿ, ಕುಡಚಿ, ಉಗರ್ ಖುರ್ದ್, ಶೇಡಬಾಳ, ವಿಜಯನಗರ, ಮೀರಜ್, ಅರಗ್, ಧಲ್ಗಾಂವ್, ಜತ್ ರಸ್ತೆ, ವಾಸುದ್ ಹಾಗೂ ಸಂಗೋಲಾಗಳಲ್ಲಿ ನಿಲ್ಲಲಿದೆ.

ಕಾಯ್ದಿರಿಸದ ರೈಲ್ವೆ ಟಿಕೇಟ್‍ನ್ನು ನಿಲ್ದಾಣಗಳಲ್ಲಿ ಬುಕಿಂಗ್ ಕೌಂಟರ್ ಗಳ ಮೂಲಕ ಮತ್ತು ಯುಟಿಎಸ್ ಅಪ್ಲಿಕೇಶನ್ ಮೂಲಕವೂ ಬುಕ್ ಮಾಡಬಹುದು. ಅನಾನುಕೂಲತೆ ತಪ್ಪಿಸಲು ಪ್ರಯಾಣಿಕರು ಟಿಕೇಟ್ ಪಡೆದು ಪ್ರಯಾಣಿಸಬೇಕು.

ಈ ವಿಶೇಷ ರೈಲುಗಳ ಸಮಯ ಮತ್ತು ನಿಲುಗಡೆ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಲು ಅಥವಾ NTES ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News