×
Ad

ಎಸ್ ಐಆರ್ ಮೂಲಕ ಜನರ ಹಕ್ಕು ಕಸಿಯುತ್ತಿರುವ ಕೇಂದ್ರ ಸರಕಾರ: ಭೀಮರಾವ್‌ ಟಿ.ಟಿ ಆರೋಪ

Update: 2026-05-29 21:09 IST

ಕಲಬುರಗಿ: ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ  ಹೆಸರಿನಲ್ಲಿ ದೇಶವ್ಯಾಪಿ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗ ಹೊರಟಿವೆ ಎಂದು ಎಸ್.ಐ.ಆರ್ ವಿರೋಧಿ ಕರ್ನಾಟಕ, ಎಸ್. ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ ಕರ್ನಾಟಕದ ಮುಖಂಡ ಭೀಮರಾವ್‌ ಟಿ.ಟಿ. ಅವರು ಗಂಭೀರ ಆರೋಪ ಮಾಡಿದರು.

ನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಕೊಟ್ಟಿರುವ ನಿರ್ದಿಷ್ಟ ಸಮಯದಲ್ಲಿ ಇದನ್ನು ಮಾಡಲು ಆಗುವುದಿಲ್ಲ, ಬದಲಾಗಿ ಐದಾರು ತಿಂಗಳು ಸಮಯ ಕೊಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ 13 ರಾಜ್ಯಗಳಲ್ಲಿ ಎಸ್.ಐಆರ್ ನಡೆಸಿ 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಇದರಲ್ಲಿ ಕನಿಷ್ಠ 5 ಕೋಟಿ ಅರ್ಹ ಮತದಾರರು ಎಂದು ತಿಳಿಸಿದರು.

ಈ ವೇಳೆ ಮಹಾಂತಪ್ಪ ಸಂಗಾವಿ, ಸಲೀಂ ಅಹ್ಮದ್‌, ಲಕ್ಷ್ಮಣ ಮಂಡಲಗೇರಾ, ರೇಣುಕಾ ಸಿಂಗೆ, ಬಾಲಾಜಿ ಕಾಂಬಳೆ, ಮೈಲಾರಿ ದೊಡ್ಡನಿ ಶೇಖರಸಿಂರ್‌ ಇತರರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News