×
Ad

ಕಲಬುರಗಿ ನಗರಕ್ಕೆ ನಾಳೆ ಸಿಎಂ ಭೇಟಿ ಹಿನ್ನಲೆ; ಸಂಚಾರ ಮಾರ್ಗದಲ್ಲಿ ಬದಲಾವಣೆ

Update: 2025-09-29 22:13 IST

ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ 

ಕಲಬುರಗಿ: ಪ್ರವಾಹ ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ವಿವಿಧ ಖಾತೆಗಳ ಸಚಿವರು ನಾಳೆ (ಸೆ.30) ಕಲಬುರಗಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ವಿವಿಧ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವಾಗ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ಎಸ್.ಬಿ ಪೆಟ್ರೋಲ್ ಪಂಪ್ ವರೆಗೆ ಎಲ್ಲ ಮಾದರಿಯ ಓಡಾಟ ನಿಷೇಧಿಸಲಾಗಿದೆ.

ಮಾನ್ಯ ಮುಖ್ಯಮಂತ್ರಿಗಳು ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿರುವಾಗ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ವಿಜಯ ವಿದ್ಯಾಲಯ ಕಾಲೇಜು ಹತ್ತಿರವಿರುವ ಚರ್ಚವರೆಗೆ ಎಲ್ಲ ಮಾದರಿಯ ಓಡಾಟ ನಿಷೇಧಿಸಲಾಗಿದೆ.

ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್ ಸ್ಥಳಗಳು:

1) ಮುಖ್ಯಮಂತ್ರಿಗಳ ವಾಹನ, ಸಚಿವರು ಹಾಗೂ ಶಾಸಕರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳ ವಾಹನಗಳಿಗೆ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲಾಗಿರುತ್ತದೆ.

2) ಮುಖ್ಯಮಂತ್ರಿಗಳ ಸಭೆಗೆ ಆಗಮಿಸುವ ಇನ್ನಿತರ ಅಧಿಕಾರಿಗಳ ವಾಹನಗಳನ್ನು NCC ಹಾಗೂ ಕನ್ನಡ ಭವನದ ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.

3) ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ನಾಳೆ ಕುಡಾ (KUDA) ಕಛೇರಿಯ ಆವರಣದಲ್ಲಿ ಪಾರ್ಕಿಂಗ್ ಮಾಡುವುದು.

ಮಾರ್ಗ ಬದಲಾವಣೆಯ ಸ್ಥಳಗಳು:

► ಕೇಂದ್ರ ಬಸ್ ನಿಲ್ದಾಣದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಕಡೆಗೆ ಚಲಿಸುವ ವಾಹನಗಳು ರಾಷ್ಟ್ರಪತಿ ವೃತ್ತದಿಂದ ಶರಣಬಸವೇಶ್ವರ ಕಾಲೇಜು ಎದುರುಗಡೆಯಿಂದ ಆನಂದ ಓ.ಪಿ ಮಾರ್ಗವಾಗಿ ಗೋವಾ ಹೋಟೆಲ್ ಕ್ರಾಸ್ ಮೂಲಕ ಸಂಚಾರ ಮಾಡುವುದು.

► ಸೂಪರ್ ಮಾರ್ಕೆಟ್‌ ದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತ ಕಡೆಗೆ ಚಲಿಸುವ ವಾಹನಗಳು ಎಸ್.ಬಿ ಪೆಟ್ರೋಲ್ ಮೂಲಕ ಜಿಲ್ಲಾ ನ್ಯಾಯಾಲಯದ (ಕೋರ್ಟ) ಎದುರುಗಡೆಯಿಂದ ನೋಬೆಲ್ ಶಾಲೆ ಮಾರ್ಗವಾಗಿ ಚಲಿಸುವುದು.

► ಸಭೆ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸದರಿ ಮಾರ್ಗಗಳನ್ನು ಬಳಸದೇ ಪರ್ಯಾಯ ಮಾರ್ಗಗಳಲ್ಲಿ ಚಲಿಸಲು ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News