×
Ad

ದೀಪಾವಳಿ ಹಬ್ಬ : ಕಲಬುರಗಿ-ಬೆಂಗಳೂರು ನಡುವೆ ವಿಶೇಷ ರೈಲುಗಳ ಸೇವೆ ಮುಂದುವರಿಕೆ

Update: 2025-10-24 17:44 IST

ಸಾಂದರ್ಭಿಕ ಚಿತ್ರ

ಕಲಬುರಗಿ : 2025ರ ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಇಲಾಖೆಯು ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ನಡುವೆ ಸಂಚರಿಸಲಿರುವ ವಿಶೇಷ ರೈಲುಗಳ ಸೇವೆಯನ್ನು ಮುಂದುವರೆಸಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 06203) ಹಾಗೂ ಕಲಬುರಗಿ-ಯಶವಂತಪುರ ವಿಶೇಷ ರೈಲು (ರೈಲು ಸಂಖ್ಯೆ 06204) ಅ.26 ರಂದು ಸಂಚರಿಸಲಿದೆ.

ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 06207) ಈ ರೈಲಿನ ಸೇವೆಯು ಅ.27 ರಂದು ಹಾಗೂ ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲುಗಳು (ರೈಲು ಸಂಖ್ಯೆ 06208) ಅ.28 ರಂದು ಸಂಚರಿಸಲಿದೆ.

ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ವಿಶೇಷ ರೈಲು (ರೈಲು ಸಂಖ್ಯೆ 06209) ಅ.28 ರಂದು ಹಾಗೂ ಕಲಬುರಗಿ - ಬೆಂಗಳೂರು ಕಂಟೋನ್ಮೆಂಟ್ (ರೈಲು ಸಂಖ್ಯೆ 06210) ಈ ವಿಶೇಷ ರೈಲುಗಳು ಅ.29 ರಂದು ಸಂಚರಿಸಲಿದೆ. ಮೇಲಿನ ವಿಶೇಷ ರೈಲುಗಳ ನಿಲುಗಡೆ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ವಿಶೇಷ ಶುಲ್ಕದ ಮೇಲೆ ವಿಶೇಷ ರೈಲುಗಳಿಗೆ ಬುಕಿಂಗ್‍ಗಳು ಎಲ್ಲಾ ಗಣಕೀಕೃತ ಕೇಂದ್ರಗಳಲ್ಲಿ ಮತ್ತು www.irctc.co.in ವೆಬ್‍ಸೈಟ್‍ ನಲ್ಲಿ ಮಾಡಬಹುದಾಗಿದೆ. ಕಾಯ್ದಿರಿಸದ ಬೋಗಿಗಳಿಗೆ ಬುಕಿಂಗ್‍ಗಳನ್ನು ನಿಲ್ದಾಣಗಳಲ್ಲಿನ ಬುಕಿಂಗ್ ಕೌಂಟರ್‍ಗಳಲ್ಲಿ ಮತ್ತು ಯುಟಿಎಸ್ (UTS) ಅಪ್ಲಿಕೇಶನ್ ಮೂಲಕವೂ ಮಾಡಬಹುದು.

ಆದ್ದರಿಂದ ಪ್ರಯಾಣಿಕರು ಅನಾನುಕೂಲತೆಗಳನ್ನು ತಪ್ಪಿಸಲು ತಪ್ಪಿದೇ ಟಿಕೆಟ್ ಪಡೆದು ಪ್ರಯಾಣಿಸಬೇಕು. ಈ ವಿಶೇಷ ರೈಲುಗಳ ನಿಲುಗಡೆ, ವಿವರವಾದ ಸಮಯದ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಎನ್.ಟಿ.ಇ.ಎಸ್. (NTES) ಅಪ್ಲಿಕೇಶನ್ ಡೌನ್‍ಲೋಡ್ ಮೂಲಕ ಮಾಡಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News