ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಭೀಮರಾವ್ ಕೊಟ್ಟರ್ಗಿ ನಿಧನ
Update: 2025-10-18 23:15 IST
ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರರ, ಆಳಂದ ತಾಲ್ಲೂಕಿನ ರುದ್ರವಾಡಿ ಗ್ರಾಮದ ನಿವಾಸಿ ಭೀಮರಾವ್ ರೇವಣಸಿದ್ದಪ್ಪ ಕೊಟ್ಟರ್ಗಿ (92) ಶನಿವಾರ ಸಂಜೆ ಮೃತಪಟ್ಟಿದ್ದಾರೆ.
ಮೂವರು ಪುತ್ರರು ಮಕ್ಕಳು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ವೇಳೆಯಲ್ಲಿ ತಾಲ್ಲೂಕು ದಂಡಾಧಿಕಾರಿಗಳು ರವಿವಾರ ಗೌರವ ವಂದನೆ ಸಲ್ಲಿಸಲಿದ್ದಾರೆ.
ಹೋರಾಟಗಾರ ನಿಧನಕ್ಕೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್, ಅಶೋಕ್ ಸಾವಳೇಶ್ವರ, ಗುರುನಾಥ್ ಹೀರಾ ಸೇರಿದಂತೆ ಆಳಂದ ತಾಲ್ಲೂಕಿನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯೆ ರವಿವಾರ ರವಿವಾರ ಮಧ್ಯಾಹ್ನ 2 ಗಂಟೆಗೆ ಗ್ರಾಮದ ಅವರ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಸಂಬಂಧಿ ಶರಣಬಸಪ್ಪ ಹೀರಾ ತಿಳಿಸಿದ್ದಾರೆ.