ಕಲಬುರಗಿ | ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಕಲಬುರಗಿ: 2023-24ರ ಸಾಲಿನ ಕೆಕೆಆರ್ ಡಿಬಿ ಯೋಜನೆ ಅಡಿಯಲ್ಲಿ ಕಲಬುರಗಿ ತಾಲೂಕಿನ ಉದನೂರ್ ಗ್ರಾಮದಲ್ಲಿ ನಿರ್ಮಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು.
ಶಾಲೆಯ ನೂತನ ಕಟ್ಟಡವನ್ನು ನಂದಿಕೂರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಾಂತ ಸೀತನೂರ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಗಣ್ಯರು, ಉದನೂರ್ ಗ್ರಾಮದ ಜನರ ಬಹುದಿನದ ನಿರೀಕ್ಷೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾರ್ಯ ಕೊನೆಗೂ ಈಡೇರಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಮಾರಂಭದಲ್ಲಿ ಕೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಜಮಖಂಡಿ, ನಂದಿಕೂರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮೀಬಾಯಿ ಕುಪೇದ್ರ ವರ್ಮಾ, ಸಮನ್ವಯ ಅಧಿಕಾರಿ ಡಾ.ಪ್ರಕಾಶ ರಾಠೋಡ್, ವಿಜಯಕುಮಾರ ಜಮಖಂಡಿ, ಡಾ.ಪ್ರಕಾಶ ರಾಠೋಡ, ಜೈಭೀಮ ಕೊರಳ್ಳಿ, ಬಸಮ್ಮ ಪೂಜಾರಿ, ಶೋಭಾ, ದುಬಲಗುಂಡಿ, ಶಾಂತಕುಮಾರ ಬಿರಾದಾರ, ಶಿವಪುತ್ರ, ಮೌನೇಶ್ವರ, ವಿಶ್ವನಾಥ, ಶರಣಬಸಪ್ಪ ಮೂಲಗೆ, ಹಣಮಂತ, ಬಾಜಿರಾವ್, ಹಝರತ್ ಸಾಬ್, ಶರಣಬಸಪ್ಪ ಚಿಮುಳ್ಳಿ, ಹೇರುಲಿಂಗ, ವಿಠಲ, ಸುಧೀರ, ಕಮಲಾಬಾಯಿ, ಆಸಂಬೇಗಂ, ಸುಜಾತ ಸೇರಿದಂತೆ ಇತರರು ಉಪಸ್ಥಿತರಿದ್ದರು.