ಜೇವರ್ಗಿ | ಕಾರು-ಟಂಟಂ ನಡುವೆ ಅಪಘಾತ : ಇಬ್ಬರು ಸ್ಥಳದಲ್ಲೇ ಮೃತ್ಯು
Update: 2025-10-21 20:20 IST
ಕಲಬುರಗಿ : ಕಾರು ಮತ್ತು ಗೂಡ್ಸ್ ಟಂಟಂ ನಡುವೆ ಭೀಕರ ಅಪಘಾತ ಸಂಭವಿಸಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜೇವರ್ಗಿ ತಾಲೂಕಿನ ನೇದಲಗಿ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಜಾಲವಾದಿ ಗ್ರಾಮದ ಗೂಡ್ಸ್ ವಾಹನದ ಚಾಲಕ ಬಾಷಾಸಾಬಾ (45) ಮತ್ತು ಶಂಕ್ರೆಪ್ಪ (41)) ಮೃತಪಟ್ಟವರು ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದವರುವರೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂದೇವಾಲದಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಟಂಟಂ ಗೆ ಢಿಕ್ಕಿ ಹೊಡೆದ ರಭಸಕ್ಕೆ ಟಂಟಂ ನುಜ್ಜುಗುಜ್ಜಾಗಿದೆ. ಟಂಟಂ ಆಟೋ ಜಾಲವಾದಿಯಿಂದ ಜೇವರ್ಗಿ ಮಾರುಕಟ್ಟೆಗೆ ಬಾರೆಹಣ್ಣು ಮಾರಲು ಬರುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಕುರಿತು ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.