×
Ad

ಕಲಬುರಗಿ | ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿದವರು ಅಂಬೇಡ್ಕರ್: ನಿಂಗಣ್ಣ ಹುಳಗೋಳಕರ್

Update: 2025-12-07 11:06 IST

ಕಲಬುರಗಿ: ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದoತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಶಹಾಬಾದ ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹೇಳಿದರು.

ಅವರು ಶನಿವಾರ ಶಹಾಬಾದ್‌ ನಗರದ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಾಲಯಲದಲ್ಲಿ ಆಯೋಜಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬಿಜೆಪಿ ಮುಖಂಡ ಅರುಣ ಪಟ್ಟಣಕರ್ ಮಾತನಾಡಿ, ಬಾಬಾ ಸಾಹೇಬರ ಭಾಚಿತ್ರಕ್ಕೆ ಪೂಜೆ ಸಲ್ಲಿಸುವುದಕ್ಕಿಂತ ಅವರ ತತ್ವಗಳ ಅನುಷ್ಠಾನವಾಗಬೇಕಿದೆ. ಆಗ ಮಾತ್ರ ದೇಶದಲ್ಲಿ ಸಮಗ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಕನಕಪ್ಪ ದಂಡಗುಲಕರ್, ಮೋಹನ ಹಳ್ಳಿ ಮಾತನಾಡಿದರು.

ಸದಾನಂದ ಕುಂಬಾರ, ದಿನೇಶ ಗೌಳಿ, ರಾಜು ಮಾನೆ, ಶಿವಕುಮಾರ ಇಂಗಿನಶೆಟ್ಟಿ, ಅನೀಲಕುಮಾರ ಬೋರಗಾಂವಕರ್, ಸಾಯಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ಪದ್ಮಾ ಕಟಗೆ, ಬಸವರಾಜ ಹಡಪದ, ರೇವಣಸಿದ್ದ ಮತ್ತಿಮಡು, ಉಮೇಶನಿಂಬಾಳಕರ, ಶ್ರೀನಿವಾಸ ದೇವಕರ, ಭೀಮಯ್ಯ ಗುತ್ತೆದಾರ, ನಾಗರಾಜ ಮುದ್ನಾಳ, ಅನೀಲ ದೊಡ್ಡಮನಿ, ವಿಕಾಸ ಕರಣಿಕ, ಕಾಶಿನಾಥ ಹಂಪಿ ಇತರರು ಇದ್ದರು.

ಬಸವರಾಜ ಬಿರಾದಾರ ನಿರೂಪಿಸಿ, ಸ್ವಾಗತಿಸಿದರು, ಅಮರ ಕೋರೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News