×
Ad

ಕಲಬುರಗಿ| ನಾಗರಾಳ ಜಲಾಶಯದಿಂದ 2,500 ಕ್ಯೂಸೆಕ್ ನೀರು ಬಿಡುಗಡೆ: ಅಮೃತ ಪವಾರ

Update: 2025-08-08 15:35 IST

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಿಂದ ಸುಮಾರು 2,500 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ ಎಂದು ಮುಲ್ಲಾಮಾರಿ ಯೋಜನೆಯ ಎಇಇ ಅಮೃತ ಪವಾರ ಹೇಳಿದ್ದಾರೆ.

ಜಲಾಶಯದ ಎರಡು ಗೇಟುಗಳ ಮೂಲಕ 2,500 ಕ್ಯೂಸೆಕ್‌ ನೀರು ಹೊರ ಬಿಟ್ಟರೆ, ಬೆಳಗಿನ ಜಾವ ಒಂದು ಗೇಟು ಬಂದ್‌ ಮಾಡಿ ಹೊರಹರಿವನ್ನು 430 ಕ್ಯೂಸೆಕ್ ಗೆ ತಗ್ಗಿಸಲಾಗಿದೆ. ಸದ್ಯ ಜಲಾಶಯಕ್ಕೆ 1,600 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಹಾಗಾಗಿ ನದಿ ಪಾತ್ರದಲ್ಲಿ ರೈತರು ಜಾನುವಾರುಗಳೊಂದಿಗೆ ನೀರಿಗೆ ಇಳಿಯುವುದಾಗಲಿ, ಕಾರ್ಮಿಕರು, ಮೀನುಗಾರರು ಮತ್ತು ಮಹಿಳೆಯರು ನದಿಗೆ ಬಟ್ಟೆ ತೊಳೆಯಲು ಹೋಗಬಾರದು ಎಂದು ಎಇಇ ಅಮೃತ ಪವಾರ ಮತ್ತು ಎಇ ವಿನಾಯಕ ಚವ್ಹಾಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜಲಾಶಯದಿಂದ ನದಿಗೆ ನೀರು ಬಿಟ್ಟಿರುವುದರಿಂದ ಮುಲ್ಲಾಮಾರಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರಿಂದ ತಾಜಲಾಪುರದ ಸೇತುವೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಸಂಪರ್ಕದಿಂದ ವಂಚಿತರಾಗಿದ್ದಾರೆ. ಬೇರೆ ಊರಿಗೆ ತೆರಳಿದ್ದ ತಾಜಲಾಪುರ ಗ್ರಾಮದ ವ್ಯಕ್ತಿ ನಿಖಿಲ ರಾಮತೀರ್ಥ ಎಂಬುವವರು ಮಧ್ಯ ರಾತ್ರಿ ಕಾರಿನಲ್ಲಿ ಗ್ರಾಮಕ್ಕೆ ಮರಳುವಾಗ ಸೇತುವೆ ಮುಳುಗಿದ್ದರಿಂದ ಬೆಳಗಾಗುವವರೆಗೆ ರಸ್ತೆಯಲ್ಲಿಯೇ ಇಡಿ ರಾತ್ರಿ ಕಳೆದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News