ಕಲಬುರಗಿ | ವಿಧಾನಸೌಧ ಚಲೋ ಕಾರ್ಯಕ್ರಮಕ್ಕೆ ಬೆಂಬಲ ನೀಡಲು ಮನವಿ
Update: 2025-03-02 22:01 IST
ಕಲಬುರಗಿ : ಮಾ.10 ರಂದು ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಿಧಾನಸೌಧ ಚಲೋ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ರೈತರು, ಕೃಷಿ ಕಾರ್ಮಿಕರು ಬೆಂಬಲ ನೀಡಬೇಕೆಂದು ಎಐಕೆಕೆಎಮ್‍ಎಸ್ ಜಿಲ್ಲಾಧ್ಯಕ್ಷ ಗಣಪತಿರಾವ್ ಮಾನೆ ಕಾರ್ಮಿಕರಲ್ಲಿ ಮನವಿ ಮಾಡಿದರು.
ರಾಜ್ಯ ಮಟ್ಟದ ವಿಧಾನಸೌಧ ಚಲೋ ಕಾರ್ಯಕ್ರಮದ ನಿಮಿತ್ತ ಶಹಾಬಾದ್ ತಾಲೂಕಿನ ಭಂಕೂರನಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರ ಬಳಿಗೆ ತೆರಳಿ ಚಳುವಳಿಯ ಪ್ರಚಾರ ಕಾರ್ಯಕ್ರಮ ಕೈಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಮುಖಂಡರಾದ ಭಾಗಣ್ಣ ಬುಕ್ಕಾ, ರಾಜೇಂದ್ರ ಅತನೂರ,ನೀಲಕಂಠ ಎಂ. ಹುಲಿ, ಸ್ವಾಮಿ, ಸಿದ್ದಮ್ಮ ಉಪಸ್ಥಿತರಿದ್ದರು.