×
Ad

ಕಲಬುರಗಿ | NPK ಮಿಶ್ರಣ ರಸಗೊಬ್ಬರ, ಕೀಟನಾಶಕ ತಯಾರಿಕಾ ಘಟಕಗಳ ಮೇಲೆ ಕೃಷಿ ಅಧಿಕಾರಿಗಳ ದಾಳಿ, ಪರಿಶೀಲನೆ

Update: 2025-07-30 21:51 IST

ಕಲಬುರಗಿ: ಜಿಲ್ಲೆಯ NPK ಮಿಶ್ರಣ ರಸಗೊಬ್ಬರ ಹಾಗೂ ಕೀಟನಾಶಕ ತಯಾರಿಕಾ ಘಟಕಗಳ ಮೇಲೆ ಅಪರ ಬೆಂಗಳೂರು ಕೃಷಿ ನಿರ್ದೇಶಕರ ಜಾಗೃತ ಕೋಶ ಹಾಗೂ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ದಿಢೀರ್ ದಾಳಿ ಮಾಡಿ, ಪರಿಶೀಲನೆ ನಡೆಸಿದರು.

NPK ಮಿಶ್ರಣ ರಸಗೊಬ್ಬರ ತಯಾರಿಕಾ ಘಟಕಗಳಾದ ಮೆ. ಶರಣಬಸವೇಶ್ವರ ಎಂಟರ್ ಪ್ರೆಸ್‌ಸ್ ಹಾಗೂ ಮೆ. ಹೆಲಿಕಾನ್‌ ಅಗ್ರೋ ಕೆಮಿಕಲ್ಸ್‌ ಲಿಮಿಟೆಡ್‌ ರವರ ಘಟಕಗಳ ಗೋದಾಮುಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ ರಸಗೊಬ್ಬರದ ಭೌತಿಕ ದಾಸ್ತಾನಿಗೂ, iFMS ತಂತ್ರಾಂಶದಲ್ಲಿರುವ ದಾಸ್ತಾನಿಗೂ ಹಾಗೂ ದಾಸ್ತಾನು ವಹಿಯಲ್ಲಿರುವ ದಾಸ್ತಾನನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ರಸಗೊಬ್ಬರ ಖರೀದಿ, ಮಿಶ್ರಣ ರಸಗೊಬ್ಬರ ಉತ್ಪಾದನೆ, ಮಿಶ್ರಣ ರಸಗೊಬ್ಬರದ ಮಾರಾಟದ ಕುರಿತು ಮತ್ತು ಮಿಶ್ರಣ ರಸಗೊಬ್ಬರ ಮಾದರಿಗಳ ವಿಶ್ಲೇಷಣಾ ಪರಿಶೀಲಿಸಿ ರಸಗೊಬ್ಬರ ನಿಯಂತ್ರಣ ಆದೇಶ-1985 ಮತ್ತು ಅಗತ್ಯ ವಸ್ತುಗಳ ಕಾಯ್ದೆ-1955 ನ್ನು ಉಲ್ಲಂಘಿಸಿದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಬೆಂಗಳೂರು ಅಪಾರ ಕೃಷಿ ನಿರ್ದೇಶಕರ ಜಾಗೃತ ದಾಳದ ದೇವರಜ್, ಜಾಗೃತಿ ದಳದ ಕಲಬುರಗಿ ಉಪ ಕೃಷಿ ನಿರ್ದೇಶಕರಾದ ರಾಧಕೃಷ್ಣ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಸಮದ್‌ ಪಟೇಲ್ ಸೇರಿದಂತೆ ಜಾಗೃತಿ ದಳದ ನಾಲ್ಕು ತಂಡದ ಅಧಿಕಾರಿಗಳಿಂದ ದಾಳಿ ನಡೆಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News