×
Ad

ಕಲಬುರಗಿ | ಅಕ್ಷರ ಬೆಳದಿಂಗಳು ಕೃತಿ ಜನಾರ್ಪಣೆ

ಕಲಿಕೆ, ಬಳಕೆಯಿಂದ ಕನ್ನಡ ಭಾಷೆ ವೃದ್ಧಿ: ಎ.ಕೆ.ರಾಮೇಶ್ವರ

Update: 2025-08-24 21:57 IST

ಕಲಬುರಗಿ : ನಮ್ಮ ದೈನಂದಿನ ಜೀವನದಲ್ಲಿ ಮಾತೃ ಭಾಷೆಯ ಕಲಿಕೆ ಮತ್ತು ಬಳಕೆಯಿಂದ ಅದರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಹಮ್ಮಿಕೊಂಡ ಸಮಾರಂಭದಲ್ಲಿ ಶಿಕ್ಷಕ-ಲೇಖಕ ಗುಂಡಪ್ಪ ವಾಯ್ ಗೊಟಕರ ಅವರ ಅಕ್ಷರದ ಬೆಳದಿಂಗಳು ಕವನ ಸಂಕಲನವನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ಭಾಷೆ ಸಂವಹನ ಮಾಧ್ಯಮ. ಅದರಿಂದ ನಿಜವಾದ ಜ್ಞಾನ ಹೊಂದಬಹುದು. ಮಕ್ಕಳಲ್ಲಿ ಕನ್ನಡ ನಾಡು ನುಡಿ ಅಭಿಮಾನ ಬೆಳೆಸಬೇಕು. ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಮೋಹ, ಪ್ರೀತಿ ತೋರಿಸಬೇಕು. ಆಗ ಮಾತ್ರ ಸಾಹಿತ್ಯ ಸಂಸ್ಕೃತಿ ಹೆಚ್ಚಿಸಬಹುದಾಗಿದೆ. ಪುಸ್ತಕ ಖರೀದಿಸಿ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಸ್ತುತ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾವ್ಯ ರಚನೆಯಾಗಬೇಕಿದೆ. ನಮ್ಮ ಹಿರಿಯರು ನಮಗಾಗಿ ಬಳುವಳಿಯಾಗಿ ಬಿಟ್ಟು ಹೋದ ಕಲೆ ಹಾಗೂ ಸಂಸ್ಕೃತಿಯ ಬಗ್ಗೆ ಇಂದಿನ ಹೊಸ ಜನಾಂಗಕ್ಕೆ ಮನ ಮುಟ್ಟುವಂತೆ ತಿಳಿಸಬೇಕಿದೆ ಎಂದ ಅವರು, ಶಿಕ್ಷಣದೊಂದಿಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಶಾಲೆ ಕಡೆ ಪರಿಷತ್ತಿನ ನಡೆ ಎನ್ನುವ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಕೃತಿ ಲೇಖಕ ಗುಂಡಪ್ಪ ಗೊಟಕರ, ಕೃತಿ ಪರಿಚಯಿಸಿದ ಸಾಹಿತಿ ಡಾ ರಾಜಶೇಖರ ಮಾಂಗ್ ಅವರು ಮಾತನಾಡಿದರು.

ಎ.ಕೆ.ಆರ್.ದೇವಿ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಅಫಜಲಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ಗಾಡಿ, ಶ್ರೀ ಸಿದ್ಧರಾಮೇಶ್ವರ ಸರಕಾರಿ-ಅರೆ ಸರಕಾರಿ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಶರಣಪ್ಪ ಗುಂಡಗುರ್ತಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಸಹ ಕಾರ್ಯದರ್ಶಿ ರಾಜೇಂದ್ರ ಮಾಡಬೂಳ, ಶಿಕ್ಷಕ ಪರಮಾನಂದ ಸರಸಂಬಿ ವೇದಿಕೆ ಮೇಲಿದ್ದರು. ವೈಶಾಕಿ ಶಾಬಾದಕರ ಭರತನಾಟ್ಯ ನೃತ್ಯ ನಡೆಸಿಕೊಟ್ಟರು.

ಪ್ರಮುಖರಾದ ಡಿ.ಎಂ.ನದಾಫ್, ಪ್ರಭವ ಪಟ್ಟಣಕರ್, ಅನುಪಮಾ ಅಪಗುಂಡೆ, ಬಾಹುಬಲಿ ಮಾಲಗತ್ತಿ, ಮಲ್ಲಿಕಾರ್ಜುನ ರೋಣದ್, ಶ್ರೀಶೈಲ ಜಾಧವ, ಡಿ.ಪಿ. ಸಜ್ಜನ್, ಅಮರಯ್ಯ ಕುಮಸಗಿ, ಸಿದ್ಧಾರ್ಥ ಬಸರಿಗಿಡ, ನಾಗೇಶ ಕೊಳ್ಳಿ, ಡಾ.ರೆಹಮಾನ್ ಪಟೇಲ್, ದಿನೇಶ ಮದಕರಿ, ಸೋಮಶೇಖರಯ್ಯ ಹೊಸಮಠ, ಬಸಯ್ಯಾ ಸ್ವಾಮಿ, ಚಂದ್ರಕಲಾ ಪಾಟೀಲ, ರೂಪಾ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News