×
Ad

ಕಲಬುರಗಿ: ವೈದ್ಯರ ನಿರ್ಲಕ್ಷ್ಯ ಆರೋಪ; ಬಾಣಂತಿ, ನವಜಾತ ಶಿಶು ಮೃತ್ಯು

Update: 2025-03-24 12:00 IST

ಕಲಬುರಗಿ: ಶನಿವಾರವಷ್ಟೇ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ, ರೋಗಿಗಳ ಉಸಿರಾಟಕ್ಕೆ ತೊಂದರೆ ಅನುಭವಿಸುವಂತಹ ಘಟನೆ ನಡೆದ ಬೆನ್ನಲ್ಲೇ ಇದೀಗ ಖಾಸಗಿ ಆಸ್ಪತ್ರೆಯಲ್ಲೊಂದು ಬಾಣಂತಿ, ನವಜಾತ ಶಿಶು ಮೃತಪಟ್ಟಿರುವ ದಾರುಣ ಘಟನೆ ರವಿವಾರ ನಡೆದಿದೆ.

ನಗರದ ಎಂಎಸ್ ಕೆ ಮಿಲ್ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ದಾಖಲಾಗಿದ್ದ ಬಾಣಂತಿ ಸಬಾ ಪರ್ವೀನ್ ಮತ್ತು ಆಕೆಯ ನವಜಾತ ಶಿಶು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ರವಿವಾರ ಸಂಜೆಯೇ ಕುಟುಂಬಸ್ಥರು, ಹೆರಿಗೆಗಾಗಿ ಸಬಾ ಪರ್ವೀನ್ ಅವರನ್ನು ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸಾವಿನ ಸಾಧ್ಯತೆ ಎಂದ ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ಇದರ ಮಧ್ಯೆಯೇ ಬಾಣಂತಿ ಕಡಿಮೆ ರಕ್ತದೊತ್ತಡದಿಂದಾಗಿ  ಮೃತಪಟ್ಟಿದ್ದಾಳೆ. ತಾಯಿ ಮತ್ತು ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷತನವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ಖಾಸಗಿ ಆಸ್ಪತ್ರೆಯ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.

ಈ ಕುರಿತು ಆರ್.ಜಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News