ಕಲಬುರಗಿ | ಸಣ್ಣೂರಿನ ಪ್ರೌಢಶಾಲೆಯಲ್ಲಿ ಅಂಬೇಡ್ಕರ್ ಜಯಂತೋತ್ಸವ ಆಚರಣೆ
Update: 2025-04-14 16:38 IST
ಕಲಬುರಗಿ : ತಾಲ್ಲೂಕಿನ ಸಣ್ಣೂರು ಗ್ರಾಮದ ಡಾ.ರಾಧಾಕೃಷ್ಣ ಪ್ರೌಢ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಸಂವಿಧಾನ ಶಿಲ್ಪಿ, ಡಾ. ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಆಚರಿಸಲಾಯಿತು.
ಮೌನಾಧೀಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಡಿ ಜಾಧವ್ ಮತ್ತು ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವಿಸಿ, ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎಸ್.ಎಸ್.ಚವ್ಹಾಣ, ದೈಹಿಕ ಶಿಕ್ಷಕರಾದ ಅಮರನಾಥ್, ಸಮಾಜ ವಿಜ್ಞಾನ ಶಿಕ್ಷಕ ಬಸವರಾಜ್ ಸಜ್ಜನ್, ಶಿಕ್ಷಕಿ ಬೆಬಾವತಿ, ಚಿತ್ರಕಲಾ ಶಿಕ್ಷಕ ಬಾಬಾಲದಿ ಹಾಗೂ ದ್ವಿತೀಯ ದರ್ಜೆ ಮಲ್ಲಿಕಾರ್ಜುನ್ ಹಾಜರಿದ್ದರು.