×
Ad

ಕಲಬುರಗಿ | ಕೃಷಿ ಉತ್ಪತ್ತಿನ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಣೆಗೆ ಮನವಿ

Update: 2025-05-19 16:22 IST

ಕಲಬುರಗಿ : ರಸಗೊಬ್ಬರ ನೀಡುವಲ್ಲಿ ಪ್ರಥಮ ಆದ್ಯತೆ ಕೃಷಿ ಉತ್ಪತ್ತಿನ ಸಹಕಾರ ಸಂಘಗಳಿಗೆ ನೀಡಬೇಕು ಹಾಗೂ ರಸಗೊಬ್ಬರಗಳ ಜೊತೆಗೆ ಪರ್ಯಾಯವಾಗಿ ಬೇರೆ ಗೊಬ್ಬರ ತೆಗೆದುಕೊಳ್ಳಬೇಕೆನ್ನುವ ಬೇಡಿಕೆ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೇರಬಾರದು ಎಂದು ಕಾಳಗಿ ತಾಲ್ಲೂಕಿನ ರಟಕಲ್ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ರೇವಣಸಿದ್ದ ಬಡಾ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಮುಂಗಾರು ಕೆಲವೇದಿನಗಳಲ್ಲಿ ಪ್ರಾರಂಭವಾಗಲಿದ್ದು, ರಸಗೊಬ್ಬರ ಸಮಸ್ಯೆಯೂ ಅನೇಕ ಹಳ್ಳಿಗಳಲ್ಲಿ ಎದುರಾಗುತ್ತಿದೆ. ರೈತರು ತಮ್ಮ ಬಿತ್ತನೆಗಾಗಿ ಅಗತ್ಯ ವಸ್ತುಗಳು ಖರೀದಿ ಮಾಡುತ್ತಿದ್ದಾರೆ. ಹಳ್ಳಿಗಳ ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘಗಳು ರೈತರಿಗೆ ಸಕಾಲದಲ್ಲಿ ಅಗತ್ಯ ವಸ್ತುಗಳು ನೀಡುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದ್ದಾರೆ.

ರಸಗೊಬ್ಬರ ನೀಡುವಲ್ಲಿ ಪ್ರಥಮ ಆದ್ಯತೆ ಕೃಷಿ ಉತ್ಪತ್ತಿನ ಸಹಕಾರ ಸಂಘಗಳಿಗೆ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News