ಕಲಬುರಗಿ | ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ
ಕಲಬುರಗಿ: ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಸಿಕಿಂದರಾಬಾದ್‌ದವರಾದ 45 ವರ್ಷದ ಕೆ.ಬಿ. ಅನೀಲಕುಮಾರ ತಂದೆ ಬಾಲಯ್ಯಾ ಕಂದರಿ ಇವರು ದಿನಾಂಕ: 10-09-2023 ರಂದು ಸಂಜೆ 5 ಗಂಟೆಗೆ ಸುಮಾರಿಗೆ ಇವರು ಸೇಡಂ ರೈಲ್ವೆ ಸ್ಟೇಷನ್‌ನ ಪಾರ್ಕಿಂಗ್ ಜಾಗದಿಂದ ಮನೆ ಕಡೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದು, ನಂತರ ಮರಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಎಂದು ಸೇಡಂ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.
ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 139/2024 ಕಲಂ ರನ್ವಯ ಪ್ರಕರಣ ದಾಖಲಿಸಲಾಗಿದೆ. ಈ ವ್ಯಕ್ತಿಯು ಸೇಡಂ ಪಟ್ಟಣದ ರೈಲ್ವೆ ಸ್ಟೇಶನ್‌ದಲ್ಲಿ ಸುಮಾರು 3-4 ವರ್ಷಗಳಿಂದ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದರು. ಅವರು ವಾರದಲ್ಲಿ ಒಂದು ಸಲ ಮನೆಗೆ ಬಂದು ಹೋಗುತ್ತಿದ್ದರು. ಈ ಕಾಣೆಯಾದ ವ್ಯಕ್ತಿಯನ್ನು ಎಲ್ಲ ಸಂಬoಧಿಕರಲ್ಲಿ ಹುಡುಕಿದರೂ ಎಲ್ಲಿಯೂ ಈತನು ಸಿಕ್ಕಿರುವುದಿಲ್ಲ. ಈ ವ್ಯಕ್ತಿಯು 5 ಅಡಿ 5 ಇಂಚು ಎತ್ತರ ಇದ್ದು, ಸಾದಾ ಕಪ್ಪು ಮೈಬಣ್ಣ, ಉದ್ದನೆಯ ಮುಖ, ಚೂಪಾದ ಮೂಗು, ಸದೃಢ ಮೈಕಟ್ಟುವುಳ್ಳವರಾಗಿದ್ದು, ಬಿಳಿ ಹಾಗೂ ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಅವರು ಹಿಂದಿ, ತೆಲುಗು, ತಮೀಳು ಹಾಗೂ ಇಂಗ್ಲೀಷ ಭಾಷೆಗಳನ್ನು ಮಾತನಾಡುತ್ತಾರೆ.
ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ ಕೂಡಲೇ ಸೇಡಂ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08441-276166, ಸಿಪಿಐ 08441-277026 ಹಾಗೂ ಸೇಡಂ ಪೊಲೀಸ್ ಠಾಣೆಯ ನಿಯಂತ್ರಣಾ ಕೋಣೆಗೆ ತಿಳಿಸುವಂತೆ ಕೋರಲಾಗಿದೆ.