×
Ad

ಕಲಬುರಗಿ | ಬಾಲಕನ ಪೋಷಕರ ಪತ್ತೆಗೆ ಮನವಿ

Update: 2025-07-14 19:29 IST

ಕಲಬುರಗಿ: ಕಲಬುರಗಿ ಚೈಲ್ಡ್ ಲೈನ್ ಸಂಸ್ಥೆಯ ಮೂಲಕ 8 ವರ್ಷದ ವಿಷ್ಣು ನಾಯಕ ಎಂಬ ಬಾಲಕನನ್ನು ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ದಿನಾಂಕ: 22-06-2025 ರಂದು ದಾಖಲಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಬಾಲಕನು ಕಲಬುರಗಿ ಬಾಲಕರ ಬಾಲಮಂದಿರದ ನಿವಾಸಿಯಾಗಿದ್ದು, ಈ ಬಾಲಕನು ಸ್ಪಷ್ಟವಾಗಿ ತಂದೆ-ತಾಯಿ ಹೆಸರು/ವಿಳಾಸ ಹೇಳಿರುವುದಿಲ್ಲ. ಬಿಳಿ ಬಣ್ಣ ಹೊಂದಿದ್ದು, ತೆಲಗು, ಲಂಬಾಣಿ ಹಾಗೂ ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾರೆ. ಈ ಬಾಲಕನಿಗೆ ಸಂಬಂಧಿಸಿದ ಪಾಲಕರು ಅಥವಾ ಪೋಷಕರು 60 ದಿನದೊಳಗಾಗಿ ಅವಶ್ಯಕವಾದ ದಾಖಲೆಗಳೊಂದಿಗೆ ಈ ಸಂಸ್ಥೆಗೆ ಸಂಪರ್ಕಿಸಲು ಹಾಗೂ ಕಲಬುರಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪ್ರಗತಿ ಕಾಲೋನಿಯ ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರನ್ನು ದೂರವಾಣಿ ಸಂಖ್ಯೆ 08472-269438 ಹಾಗೂ ಮೊಬೈಲ್ ಸಂಖ್ಯೆ 8660576095 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News