ಕಲಬುರಗಿ | ರಸ್ತೆಗೆ ದಿವಂಗತ ಡೇವಿಡ್ ಸಿಮಿಯೋನ್ ಹೆಸರಿಡಲು ಮನವಿ
ಕಲಬುರಗಿ: ವಾರ್ಡ ನಂ. 4ರಲ್ಲಿ ಬರುವ ಲಾಹೋಟಿ ಪೆಟ್ರೋಲ್ ಪಂಪ್ ನಿಂದ ಐವಾನ್-ಇ-ಶಾಹಿ ಮಾರ್ಗಕ್ಕೆ ದಿವಂಗತ ಡೇವಿಡ್ ಸಿಮಿಯೋನ್ ಮಾರ್ಗವೆಂದು ನಾಮಕರಣ ಮಾಡಬೇಕೆಂದು ಅಭಿವೃದ್ಧಿಪರ ಸಮಿತಿ ವತಿಯಿಂದ ಮೇಯರ್ ಯಲ್ಲಪ್ಪ ನಾಯಕೋಡಿ ಅವರಿಗೆ ಮನವಿ ಸಲ್ಲಿಸಿದರು.
ಕ್ರೈಸ್ತ ಸಮುದಾಯದಲ್ಲಿ ಧೀಮಂತ ನಾಯಕನೆಂದು ಗುರುತಿಸಿಕೊಂಡು ಇಡೀ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಮುಡುಪಾಗಿಟ್ಟು, 1980ರಲ್ಲಿ ಗುಲ್ಲಾಬಾವಡಿ ವಾರ್ಡ್‌ನಿಂದ ನಗರ ಸಭೆ ಸದಸ್ಯನಾಗಿ ಚುನಾಯಿತಗೊಂಡು ನಗರ ಸೇವಕನಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಗುರುತಿಸಿಕೊಂಡ, ಮತ್ತು ವಿಧಾನ ಸಭೆಯ ಸಭಾಧ್ಯಕ್ಷನಾಗಿ ಪೂರ್ಣಾವಧಿಯನ್ನು ಮುಗಿಸಿ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಲೂಹಿಸ್ ಕೋರಿ, ಗೌರವ ಅಧ್ಯಕ್ಷ ಶಿವಕುಮಾರ ಜಿ.ಬಾಳಿ, ರವಿ ರಾಠೋಡ, ತುಕಾರಾಮ ಕೋಳ್ಳೂರ, ಮಲ್ಲಿನಾಥ ಬಿರಾದಾರ, ಸಂಧ್ಯಾರಾಜ ಸ್ಯಾಮ್ಯೂವೆಲ್, ಸಾಲೋಮನ್ ದಿವಾಕರ, ಸತ್ಯವೀರ ಜಾನ್, ಐ.ವಿಜಯಕುಮಾರ, ಸಿ.ಕಿಸ್ಟೋಪರ್, ಸೂರ್ಯಕುಮಾರ, ಕಲ್ಲಪ್ಪ ಪಾಸ್ಟರ್, ಸುಧಿರ ಇದ್ದರು.