×
Ad

ಕಲಬುರಗಿ | ಬಿಇಡಿ ಕೋರ್ಸಿನ ದಾಖಲಾತಿಗಾಗಿ ಅರ್ಜಿ ಆಹ್ವಾನ

Update: 2025-10-14 18:47 IST

ಕಲಬುರಗಿ: ಪ್ರಸಕ್ತ 2025-26ನೇ ಸಾಲಿಗೆ ಎರಡು ವರ್ಷದ ಬಿಇಡಿ ಕೋರ್ಸಿನ್ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ, ಅನುದಾನಿತ ಹಾಗೂ ಅನುದಾನರಹಿತ ಬಿಇಡ್ ಕಾಲೇಜಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಕಲಬುರಗಿ ಡಯಟ್ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಆ) ಅವರು ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು 2025ರ ನವೆಂಬರ್ 3 ರೊಳಗಾಗಿ ಕೇಂದ್ರೀಕೃತ ದಾಖಲಾತಿ ಘಟಕ (ಸಿಇಸಿ) http://schooleducation.karnataka.gov.in ಪೋರ್ಟಲ್‍ ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಪೋರ್ಟಲ್‍ನಲ್ಲಿ ಪ್ರಕಟವಾದ ಅಧಿಸೂಚನೆಯಲ್ಲಿ ದಾಖಲಾತಿ ವೇಳಾಪಟ್ಟಿ, ಅರ್ಹತೆ, ಮೀಸಲಾತಿ, ಶುಲ್ಕ ಇತ್ಯಾದಿ ವಿವರ ಮತ್ತು ಜಿಲ್ಲಾವಾರು ಬಿಇಡ್ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ, ಅರ್ಥೈಸಿಕೊಂಡು ಆನ್‍ಲೈನ್ ಮೂಲಕ ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಸಲ್ಲಿಸಬೇಕು.

ಅದೇ ರೀತಿ ಡಯಟ್ ಕಮಲಾಪೂರದಲ್ಲಿನ ಕಚೇರಿಯು ಕಲಬುರಗಿಗೆ ಸ್ಥಳಾಂತರಗೊಂಡಿದ್ದು, ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ನೋಡಲ್ ಕೇಂದ್ರ ಡಯಟ್ ಗುಲ್ಬರ್ಗಾ ಎನ್-19 ಎಂದು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಕಲಬುರಗಿ ನಗರದ ಐವಾನ್ ಶಾಹಿ ಏರಿಯಾದಲ್ಲಿನ ದಕ್ಷಿಣ ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಹತ್ತಿರ (ಸರ್ಕಾರಿ ಬಿಇಡ್ ಕಾಲೇಜ್ ಹತ್ತಿರ ಇರುವ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿದ ಏಳು ದಿನದೊಳಗಾಗಿ ಮೂಲದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಡಯಟ್ ಕಚೇರಿಯನ್ನು ಹಾಗೂ ಮೊಬೈಲ್ ಸಂಖ್ಯೆ 9448552283, 7259192442 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News