ಕಲಬುರಗಿ | ಕ್ರೆಡಾಯ್ ಕರ್ನಾಟಕದ ಚೇರ್ಮನ್‌ರಾಗಿ ಏಷಿಯನ್ ಬಿಲ್ಡರ್ಸ್‌ನ ಮುಹಮ್ಮದ್ ರಫೀಯುದ್ದೀನ್, ಉಪಾಧ್ಯಕ್ಷ (ಉತ್ತರ)ರಾಗಿ ಉದಯ್ ಶೆಟ್ಟಿ ಆಯ್ಕೆ
ಕಲಬುರಗಿ : ಏಷಿಯನ್ ಬಿಲ್ಡರ್ಸ್‌ನ ಮುಹಮ್ಮದ್ ರಫೀಯುದ್ದೀನ್ ಅವರನ್ನು ಕ್ರೆಡಾಯ್ ಕರ್ನಾಟಕದ ಅಧ್ಯಕ್ಷರಾಗಿ ಹಾಗೂ ಉದಯ್ ಶೆಟ್ಟಿ ಅವರನ್ನು ಉಪಾಧ್ಯಕ್ಷ (ಉತ್ತರ)ರನ್ನಾಗಿ ಆಯ್ಕೆ ಮಾಡಲಾಗಿದೆ.
ಏಷಿಯನ್ ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮುಹಮ್ಮದ್ ರಫೀಯುದ್ದೀನ್ ಅವರನ್ನು 2025-27ನೇ ಅವಧಿಗೆ ಕ್ರೆಡಾಯ್ ಕರ್ನಾಟಕದ ಅಧ್ಯಕ್ಷರಾಗಿ ಹಾಗೂ ಶೆಟ್ಟಿ ಇನ್ಫ್ರಾ ವೆಂಚರ್ಸ್‌ನ ಉದಯ್ ಶೆಟ್ಟಿ ಅವರನ್ನು ಉಪಾಧ್ಯಕ್ಷ (ಉತ್ತರ)ರಾಗಿ ಆಯ್ಕೆ ಮಾಡಲಾಗಿದೆ. ಈ ಚುನಾವಣೆಯು ಬೆಂಗಳೂರಿನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆಯಿತು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮಹಾಲಕ್ಷ್ಮಿ ಬಿಲ್ಡರ್ಸ್‌ನ ಸಂಜೋಗ್ ರಾಠಿ, ಎಂ.ಎ.ನಜೀಬ್ (ಎಂಎಎಂ ಡೆವಲಪರ್ಸ್), ಸಿಟಿ ಬಿಲ್ಡರ್ಸ್‌ನ ಅಶ್ಫಾಕ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ, ಮುಹಮ್ಮದ್ ಶಫೀಕ್, ನಂದಿ ಡೆವಲಪರ್ಸ್‌ನ ಮಂಜುನಾಥ್ ರೆಡ್ಡಿ ಹಾಗೂ ಐಕಾನ್ ಬಿಲ್ಡರ್ಸ್‌ನ ಇಫ್ತೇಖಾರ್ ಅಹ್ಮದ್ ಅವರು ಮುಹಮ್ಮದ್ ರಫೀಯುದ್ದೀನ್ ಹಾಗೂ ಉದಯ್ ಶೆಟ್ಟಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತೀಯ ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಸ್ಥೆಗಳ ಒಕ್ಕೂಟವಾದ ಕ್ರೆಡಾಯ್ ಅನ್ನು 1999ರಲ್ಲಿ ಸ್ಥಾಪಿಸಲಾಗಿದೆ. ಇದು ಭಾರತದ ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಪಡಕರ ಮೇಲ್ಮಟ್ಟದ ಸಂಸ್ಥೆಯಾಗಿದ್ದು, ದೇಶದಾದ್ಯಂತ 21 ರಾಜ್ಯಗಳು ಮತ್ತು 230ಕ್ಕೂ ಹೆಚ್ಚು ನಗರ ಚಾಪ್ಟರ್ ಗಳೊಂದಿಗೆ 13,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಇದು ಭಾರತದ ಖಾಸಗಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಪಡಕರ ಮೇಲ್ಮಟ್ಟದ ಸಂಸ್ಥೆಯಾಗಿದ್ದು, ಪಾರದರ್ಶಕತೆ, ನೈತಿಕ ವ್ಯವಹಾರ ಪದ್ಧತಿಗಳು ಮತ್ತು ಸ್ಥಿರ ನಗರ ಅಭಿವೃದ್ಧಿಯ ಮೂಲಕ ಭಾರತೀಯ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕ್ರೆಡಾಯ್ ಅಧ್ಯಕ್ಷ ಅಶ್ಫಾಕ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.