×
Ad

ಕಲಬುರಗಿ | ಕಾನೂನು ಬದ್ಧ ದತ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟನೆ

Update: 2025-11-04 19:48 IST

ಕಲಬುರಗಿ: ಅಂತರರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಕಾನೂನು ಬದ್ಧ ದತ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಯಿತು.

ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ದಾಕ್ಷಾಯಣಿ ಅವ್ವ ಅವರು ಕಾನೂನು ಬದ್ಧ ದತ್ತು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾನೂನು ಬದ್ಧ ದತ್ತು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕಾರ್ಯಕ್ರಮದಲ್ಲಿ ಕಾನೂನು ಬದ್ಧ ದತ್ತು ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ.ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಸರ್ಕಾರಿ ಬಾಲಕರ ಬಾಲಮಂದಿರ, ಸರ್ಕಾರಿ ಬಾಲಕಿಯರ ಬಾಲಮಂದಿರ, ಸರ್ಕಾರಿ ಬುದ್ಧಿಮಾಂದ್ಯ ಬಾಲಕಿಯರ ಬಾಲಮಂದಿರ, ಸರ್ಕಾರಿ ವೀಕ್ಷಣಾಲಯ, ಸರ್ಕಾರಿ ಅಮೂಲ್ಯ ಶಿಶುಗೃಹ, ನಾಲ್ಕು ಚಕ್ರ ಸಂಸ್ಥೆ, ಮಾರ್ಗದರ್ಶಿ ಸಂಸ್ಥೆ, ಡಾನ್ ಬಾಸ್ಕೋ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ಡಾ.ಕಿರಣ ದೇಶಮುಖ, ವಿಶ್ವರಾಧ್ಯ ಕೆ.ಇಜೇರಿ, ಶ್ರೀದೇವಿ ಕಟ್ಟಿಮನಿ, ಶಿವನಂದವ್ವ, ಯಲ್ಲುಬಾಯಿ, ಜ್ಯೋತಿ, ಮಾಲಾ ಕಣ್ಣಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಸಹಾಯವಾಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News