×
Ad

ಕಲಬುರಗಿ | ತಂಬಾಕು ನಿಯಂತ್ರಣ ಕಾಯ್ದೆ-2003ರ ಕುರಿತು ಅರಿವು ಕಾರ್ಯಕ್ರಮ

Update: 2025-06-17 23:05 IST

ಕಲಬುರಗಿ: ಕಲಬುರಗಿ ಜೇವರ್ಗಿ ಕಾಲೋನಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಯೂತ್‌ ರೆಡ್‍ಕ್ರಾಸ್ ಘಟಕದ ವತಿಯಿಂದ ತಂಬಾಕು ನಿಯಂತ್ರಣ ಕಾಯ್ದೆ-2003ರ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿನಿಯರಿಗೆ ಸೋಮವಾರ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಭೌತಶಾಸ್ತ್ರದ ಅಧ್ಯಾಪಕ ಡಾ.ಎಸ್.ವಿ.ನಿಷ್ಠಿ ಅವರು ತಂಬಾಕಿನಿಂದಾಗುವ ಕ್ಯಾನ್ಸರ್ ಮುಂತಾದ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಮೊರಗೆ ಪ್ರಕಾಶ ವಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಹಾಜರಾ ಬೇಗಂ ಅವರು ಪರಿಸರ ಕಾಳಜಿ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ವಿಜಯಕುಮಾರ, ಡಾ.ದಯಾಸಾಗರ, ಪ್ರೊ.ನಾಗಣ್ಣ, ಡಾ.ಶರಣಬಸಪ್ಪ ಚಿಕ್ಕಳಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಯೂತ್‌ ರೆಡ್‍ಕ್ರಾಸ್ ಸಂಚಾಲಕ ಡಾ.ಪದ್ಮಣ ರಾಸಣಗಿ ಸ್ವಾಗತಿಸಿದರು. ಸುಷ್ಮಾ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ನಾಗೀಣಿ ಎಂ.ಎ. ಅವರು ಕೊನೆಯಲ್ಲಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News