ಕಲಬುರಗಿ | ಕಾರಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು
Update: 2025-06-25 17:59 IST
ಸಾಂದರ್ಭಿಕ ಚಿತ್ರ
ಕಲಬುರಗಿ: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಹಾಬಾದ್ ಸಮೀಪದ ಸಣ್ಣೂರ ರಸ್ತೆಯ ವಾಡಾ ತಾಂಡಾ ಕ್ರಾಸ್ ಸಮೀಪ ನಡೆದಿದೆ.
ಮೃತರನ್ನು ಮಾಡಬೂಳ ತಾಂಡಾದ ಸತೀಶ್ ನೇಜು ರಾಠೋಡ (30) ಎಂದು ಗುರುತಿಸಲಾಗಿದೆ.
ಮೃತ ಸತೀಷ ಮಂಗಳವಾರ ಸಂಜೆ ಸಹೋದರಿಯನ್ನು ಭಂಕೂರ ಕ್ರಾಸ್ ನಲ್ಲಿ ಬಿಟ್ಟು ಹಿಂತಿರುಗಿ ಹೋಗುವಾಗ ಎದುರಿಗೆ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.