×
Ad

ಕಲಬುರಗಿ | ಶ್ರೀ ಹಿಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ರಕ್ತದಾನ ಶಿಬಿರ

Update: 2025-06-15 21:42 IST

ಕಲಬುರಗಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಶ್ರೀ ಹಿಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಶ್ರೀ ಬಸವೇಶ್ವರ ಬೋಧನಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಡಾ. ಕಾಂಚನ ಹಿರೇಮಠ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಮತ್ತು ಅದನ್ನು ಒಂದು ಅಭಿಯಾನವಾಗಿ ರೂಪಿಸುವ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.

ಶಿಬಿರದಲ್ಲಿ ಉಪಸ್ಥಿತರಿದ್ದ ಬಸವೇಶ್ವರ ಬೋಧನಾ ಆಸ್ಪತ್ರೆಯ ಡಾ. ರಾಜೇಶ್ ಪಾಟೀಲ್, ಶ್ರೀ ಹಿಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಲ್ಲಮಪ್ರಭು ಗುಡ್ಡ ಅವರು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಶಿಬಿರದಲ್ಲಿ ಡಾ. ವಿಜಯಲಕ್ಷ್ಮಿ ಹರ್ನುರ್ಕರ್, ಡಾ. ವಿಕಾಸ್ ಚೌಹಾಣ್, ಡಾ. ಜೋಯ್, ಪರಮೇಶ್ವರ್ ಗುಡ್ಡ, ಮಹಾಂತ ಸ್ವಾಮಿ, ನರೇಶಕುಮಾರ ತಿವಾರಿ, ಅಮರೇಶ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ವೇಳೆ 30ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News