×
Ad

ಕಲಬುರಗಿ | ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬ ಪ್ರಯುಕ್ತ ರಕ್ತದಾನ ಶಿಬಿರ

Update: 2025-07-19 18:26 IST

ಕಲಬುರಗಿ: ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 83ನೇ ಜನ್ಮದಿನದ ಪ್ರಯುಕ್ತ ಶನಿವಾರ ಎನ್ಎಸ್ ಯುಐ ಕಲಬುರಗಿ ಜಿಲ್ಲಾ ಘಟಕ ಹಾಗೂ ಇಎಸ್ಐಸಿ ಮೆಡಿಕಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕಾಗ್ರೆಸ್ ಕಚೇರಿಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

ಒಬ್ಬ ವ್ಯಕ್ತಿ ರಕ್ತ ನೀಡುವುದರಿಂದ 3 ರೋಗಿಗಳ ಜೀವ ಉಳಿಸಬಹುದು, ಹೃದಯ ಸಂಬಂಧಿಸಿದ ಕಾಯಿಲೆಯಿಂದ ದೂರ ಇರಬಹುದು, ಕ್ಯಾನ್ಸರ್ ಮತ್ತು BP ನಿಯಂತ್ರಣದಲ್ಲಿ ಇಡಬಹುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು, ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಹೀಗೆ ಅನೇಕ ರೀತಿಯಿಂದ ರಕ್ತ ದಾನ ಮಾಡುವವರಿಗೆ ಸಹಾಯ ಆಗುತ್ತದೆ ಎಂದು ದಾನಿಗಳಿಗೆ ಅರಿವು ಮೂಡಿಸಲಾಯಿತು.

ದಾನಿಗಳೇ ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು ಎಂದು NSUI ಜಿಲ್ಲಾಧ್ಯಕ್ಷರಾದ ಗೌತಮ ಕರಿಕಲ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷ ಮಝಹರ್ ಖಾನ್ ಆಲಂ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಕೀಲ್ ಸರಡಗಿ, ಮಹಿಳಾ ಘಟಕದ ಅಧ್ಯಕ್ಷರಾದ ರೇಣುಕಾ ಸಿಂಗೆ, ಕಾಂಗ್ರೆಸ್ ಮುಖಂಡರಾದ ಡಾ. ಕಿರಣ್ ದೇಶಮುಖ್, ಅಭಿಷೇಕ್ ಅಲ್ಲಮಪ್ರಭು ಪಾಟೀಲ್, ನೀಲಕಂಠರಾಯ ಮೂಲಗೆ, ಪ್ರವೀಣ ಪಾಟೀಲ್ ಹರವಾಳ, ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಈರಣ್ಣ ಝಳಕಿ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಶಿವಾನಂದ ಹೊನಗುಂಟಿ, ಡಾ. ಸತೀಶ್ ಬೆಲಗಟ್ಟಿ, ಭೀಮರಾವ್ ಮೇಳಕುಂದ, ಮಹೇಂದ್ರ ನಾಯ್ಡು, ಕಲಬುರಗಿ ದಕ್ಷಿಣ ಬ್ಲಾಕ್ ಯುವ ಅಧ್ಯಕ್ಷರಾದ ರಾಜು ಮಾಳಗೆ, NSUI ಉಪಾಧ್ಯಕ್ಷರಾದ ಸಂಪೂರ್ಣ ಪಾಟೀಲ್, ಫಾರುಕ್ ಮನಿಯಾರ್, ಸಂಜಯ್ ಪಾಟೀಲ್, NSUI ಚಿಂಚೋಳಿ ಅಧ್ಯಕ್ಷರಾದ ಅಂಕಿತಾ, NSUI ಜೇವರ್ಗಿ ಅಧ್ಯಕ್ಷರಾದ ಶ್ರೀಶೈಲ್, NSUI ಕಮಲಾಪುರ ಅಧ್ಯಕ್ಷರಾದ ನಾಗರಾಜ, ಡಾ.ಅತ್ತರ್, ಡಾ. ಐಶ್ವರ್ಯ, ಡಾ.ಅನೀಲ್, ಡಾ.ಸತೀಶ್ ಬೆಳಗಟ್ಟಿ, ಡಾ.ಅಬ್ದುಲ್ ಹಕಿಂ ಅತ್ತರ್, ಪ್ರದೀಪ್, ಗುಲ್ಬರ್ಗಾ ವಿವಿ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News