×
Ad

ಕಲಬುರಗಿ | ಕಾಲು ಜಾರಿ ಹಳಕ್ಕೆ ಬಿದ್ದ ವೃದ್ಧೆಯ ಮೃತದೇಹ ಪತ್ತೆ

Update: 2025-09-26 15:47 IST

ಕಲಬುರಗಿ: ಕಾಲು ಜಾರಿ ಹಳ್ಳಕ್ಕೆ ಬಿದ್ದ ವೃದ್ಧೆಯ ಮೃತದೇಹ ಪತ್ತೆಯಾಗಿರುವ ಘಟನೆ ಸೇಡಂ ತಾಲ್ಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ನಡೆದಿದೆ.

ಸೇಡಂ ತಾಲ್ಲೂಕಿನ ರುದ್ನೂರ್ ಗ್ರಾಮದ ನಿವಾಸಿ ಸುಭದ್ರಮ್ಮ ಸಿದ್ಧರಾಮ(65) ಮೃತ ವೃದ್ಧೆ ಎಂದು ತಿಳಿದುಬಂದಿದೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ರುದ್ನೂರ್ ಗ್ರಾಮದಿಂದ ಲಿಂಗಂಪಲ್ಲಿಯಲ್ಲಿ ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದರು ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಸುರಿಯುತ್ತಿರುವ ಮಳೆಯಲ್ಲೇ ಅದೇ ಗ್ರಾಮದ ಹಳ್ಳದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬಳಿಕ ವೃದ್ಧೆಯ ಪತ್ತೆಗೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದರು. ನಿರಂತರ 4 ಗಂಟೆಗಳ ಕಾರ್ಯಾಚರಣೆ ನಂತರ ಲಿಂಗಂಪಲ್ಲಿಯಿಂದ 5 ಕಿಮೀ ದೂರದ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ.

ಕಾರ್ಯಾಚರಣೆ ವೇಳೆಯಲ್ಲಿ ಮುಧೋಳ ಠಾಣೆಯ ಪಿಎಸ್ಐ ಚಂದ್ರಶೇಖರ್, ಬಸಪ್ಪ ಪ್ರಭಾರಿ ಅಗ್ನಿಶಾಮಕ ಠಾಣಾಧಿಕಾರಿ, ಶರಣಯ್ಯ ಗುತ್ತೇದಾರ್, ಮಹಿಬೂಬ. ಯಲ್ಗುರ್ದಪ್ಪ, ದಿನೇಶ್ ರೆಡ್ಡಿ, ಬಿ ನರೇಂದ್ರ, ರಿಯಾಜ್, ನಿಂಗರಾಜ್ ಸೇರಿದಂತೆ ಮತ್ತಿತರರು ಇದ್ದರು.

ಸೇಡಂ ತಾಲ್ಲೂಕಿನ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News