ಕಲಬುರಗಿ | ನಿರಂತರ ಮಳೆಗೆ ಕಟ್ಟಡ ಕುಸಿತ : ಅಂಗಡಿಗಳಿಗೆ ಹಾನಿ
Update: 2025-05-27 16:29 IST
ಕಲಬುರಗಿ : ನಗರದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಸೂಪರ್ ಮಾರ್ಕೆಟ್ ನಲ್ಲಿರುವ ಕಲ್ಕತ್ತಾ ಕಾಂಪ್ಲೆಕ್ಸ್ ಸೋಮವಾರ ರಾತ್ರಿ ಕುಸಿದು ಬಿದ್ದಿದೆ.
ಬಹಳಷ್ಟು ಹಳೆಯ ವರ್ಷದ ಕಟ್ಟಡ ಎನ್ನಲಾಗುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಟ್ಟಡದ ಮುಂದಿನ ಭಾಗ ನೆಲಕ್ಕೆ ಅಪ್ಪಳಿಸಿದೆ.
ರಾತ್ರಿ ವೇಳೆಯಲ್ಲಿ ಕಟ್ಟಡ ಕುಸಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿರುವ ಹೂವಿನ ಅಂಗಡಿಗಳು ಹಾನಿಗೀಡಾಗಿದ್ದು, ಅಪಾರ ನಷ್ಟವಾಗಿರುವುದು ವರದಿಯಾಗಿದೆ.