×
Ad

ಕಲಬುರಗಿ | ವಿದ್ಯಾರ್ಥಿಗಳ ಸುರಕ್ಷತೆಗೆ ಕ್ಯಾಮೆರಾ ಮುಖ್ಯ: ಶಂಶುದ್ದೀನ್ ಪಟೇಲ್

Update: 2025-02-24 21:45 IST

ಕಲಬುರಗಿ : ನಗರದ ಸೂಪರ್ ಮಾರ್ಕೆಟ್ ನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಎಂಪಿಎಚ್.ಎಸ್‍ನಲ್ಲಿ ಸಿಸಿ ಕ್ಯಾಮೆರಾವನ್ನು ಲೋಕಪಯೋಗಿ ಇಲಾಖೆಯ ಅಧೀಕ್ಷಕ ಇಂಜಿಯರ್ ಡಾ. ಸುರೇಶ್ ಎಲ್ ಶರ್ಮಾ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮಕ್ಕಳ ಸುರಕ್ಷತೆಗೆ ಹಾಗೂ ಅವರ ಓದಿನ ಶಿಸ್ತು ಪಾಠ ಪ್ರವಚನ ವೀಕ್ಷಣೆಗೆ ಮುಖ್ಯಸ್ಥರಿಗೆ ತುಂಬಾ ಅನುಕೂಲಕರ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರ ಶಂಶುದ್ದೀನ್ ಪಟೇಲ್ ಅವರು ಮಾತನಾಡಿ, ಕ್ಯಾಮರಾ ಅಳವಡಿಕೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಕಾಲೇಜಿನ ಸುರಕ್ಷತೆಗೆ ಅನುಕೂಲವಾಗಿದೆ ಎಂದರು.

ಕಾಲೇಜಿನಲ್ಲಿ ಹಿರಿಯ ಉಪನ್ಯಾಸಕರಾದ ಯಶವಂತಪುರ ಪವರ್, ಅಶೋಕ್ ತಳಕೇರಿ ಸರ್, ದೇವಿದಾಸ್ ಪವರ್, ಚಿದಂಬರ್ ಮೇತ್ರೆ, ನಾಗಪ್ಪ ಬಿ, ದತ್ತಾತ್ರೇಯ, ಶಿವಕುಮಾರ್, ಸುಭಾಷ್ ಚಂದ್ರ ಆರ್, ಎಚ್.ಎಸ್.ಬೇನಾಳ, ಸತೀಶ್ ಕಟಕೆ, ಸಂಗೀತ ಕಪೂರ್, ಸವಿತಾ ನಾಟೇಕರ್, ಮರೆಪ್ಪ ಗೋನಾಲ್ಕರ್.ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News