ಕಲಬುರಗಿ | ಕಾರ್ಮಿಕ ಭವನದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಪ್ರತಿಭಟನೆ
ಕಲಬುರಗಿ: ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳುಗಾರರ ಪರವಾದ ತಿದ್ದುಪಡಿ ಮಾಡದಿರಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿಯಿಂದ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ ನಡೆಸಿ ಡೆಪ್ಯೂಟಿ ಲೇಬರ್ ಕಮೀಶನರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕಳುಹಿಸಲಾಯಿತು.
ಕಾರ್ಮಿಕ ವಿರೋದಿ ತಿದ್ದುಪಡಿಗಳನ್ನು ವಿರೋಧಿಸಿ ಸಿ.ಐ.ಟಿ.ಯು ರಾಜ್ಯ ಸಮೀತಿ ನಡೆಸುತ್ತಿರುವ ಸಹಿ ಸಂಗ್ರಹ ಚಳುವಳಿಯಲ್ಲಿ ಸ್ವಯಂ ಇಚ್ಛೆಯಿಂದ ಭಾಗಿಯಾಗಿರುತ್ತೇವೆ. ಹಾಗೂ ಕಾರ್ಮಿಕರ ಹಿತಕ್ಕೆ ವಿರುದ್ಧವಾದ ಮಾಲಕರ ಪರವಾದ ಎಲ್ಲ ರೀತಿಯ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ಕಾರ್ಮಿಕರ ಹಿತವನ್ನು ರಕ್ಷಿಸಲು ಅದರ ಮೂಲಕ ಕರ್ನಾಟಕ ರಾಜ್ಯದ ಹಿತವನ್ನು ರಕ್ಷಿಸಲು ಸರ್ಕಾರವು ದೃಢ ನಿಲವನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಮ್.ಬಿ.ಸಜ್ಜನ, ಖಜಾಂಚಿ ನಾಗಯ್ಯಾ ಸ್ವಾಮಿ, ರಾಜೇಶಿ ಸಿಮೆಂಟ ಜನರಲ್ ವರ್ಕರ ಆಂಡ ಸ್ಥಾಪ ಯುನಿಯನ್ ಪ್ರಧಾನ ಕಾರ್ಯದರ್ಶಿ ರಾಜಶೇಖರ ಕೊತಂಬರಿ, ರಾಜಶೇಖರ ಕೊತಂಬರಿ, ಯಶ್ವಂತ ಪಾಟೀಲ, ವಿರುಪಾಕ್ಷಪ್ಪ ಇದ್ದರು.