×
Ad

ಕಲಬುರಗಿ | ʼಚನ್ನ ಚಿತ್ಕಳೆʼ ಅಭಿನಂದನಾ ಗ್ರಂಥ ಲೋಕಾರ್ಪಣೆ

Update: 2025-08-26 21:25 IST

ಕಲಬುರಗಿ: ವಿಭಿನ್ನ ವಿನ್ಯಾಸದಿಂದ ರೂಪುಗೊಂಡ “ಚನ್ನ ಚಿತ್ಕಳೆ” ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ನಗರದ 'ಸಿದ್ಧಶ್ರೀ ಡಿವೈನ್ ಪ್ಯಾಲೇಸ್'ನಲ್ಲಿ ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದ ಅಧ್ಯಕ್ಷರಾದ ಡಾ.ವಿಲಾಸವತಿ ಖೂಬಾ ಅವರು ಗ್ರಂಥ ಲೋಕಾರ್ಪಣೆ ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಎಲ್.ಇ ಸಂಸ್ಥೆ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಮತ್ತುಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಡಾ.ವಿಜಯಶ್ರೀ ಹಿರೇಮಠರು ಗ್ರಂಥವನ್ನು ಕುರಿತು ಮಾತನಾಡಿದರು. ನಿವೃತ್ತ ಪ್ರಾಂಶುಪಾಲರಾದ ಡಾ. ಶಕುಂತಲಾ ಸಿ ದುರಗಿ ಅವರು ಅಧ್ಯಕ್ಷತೆ ವಹಿಸಿದ್ದರು.

ಗ್ರಂಥದ ಪ್ರಧಾನ ಸಂಪಾದಕರಾದ ಡಾ.ಶಾರದಾದೇವಿ ಜಾಧವ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಚಿತ್ಕಳಾ ಮಠಪತಿ, ಶ್ರೀ ಜೆ.ಜೆ.ಸ್ವಾಮಿ ಮತ್ತು ಗ್ರಂಥದ ಸಂಪಾದಕರಾದ ಡಾ.ಶೈಲಜಾ ಬಾಗೇವಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾಗೀತೆಯನ್ನು ಕುಮಾರಿ ಅದಿತಿ ಸುಶ್ರಾವ್ಯಕಂಠದಿಂದ ಹಾಡಿದಳು. ಡಾ.ಸುರೇಂದ್ರ ಕೆರಮಗಿ, ಡಾ.ನಾಗಪ್ಪ ಗೋಗಿ ಹಾಗೂ ಡಾ.ಅನುಸೂಯಾ ಅವರು ತಮ್ಮ ಕವನಗಳನ್ನು ವಾಚಿಸಿದರು.

ಡಾ.ಚಿತ್ಕಳಾ ಮಠಪತಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಶ್ರೋತೃಗಳ ಮನಗೆದ್ದರು. ವಂದನಾರ್ಪಣೆಯನ್ನು ಡಾ.ಶೈಲಜಾ ಬಾಗೇವಾಡಿ ಅವರು ಸಲ್ಲಿಸಿದರು. ಕಲಬುರಗಿಯ ಮಹಿಳಾ ಗಣ್ಯರು ಮತ್ತು ಅತಿಥಿಗಳ ಸಾನಿಧ್ಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಡಾ. ಶ್ಯಾಮಲಾ ಸ್ವಾಮಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

ಕಲಬುರಗಿಯ ಮಹಿಳಾ ಗಣ್ಯರು ಮತ್ತು ಅತಿಥಿಗಳ ಸಾನಿಧ್ಯದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News