ಕಲಬುರಗಿ: ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ವಿವಾದ; ಬಿಗಿ ಪೊಲೀಸ್ ಭದ್ರತೆಯೊಂದಿಗೆ ಡಿಸಿ ಕಚೇರಿ ಆವರಣದಲ್ಲಿ ಶಾಂತಿ ಸಭೆ
Update: 2025-10-28 10:49 IST
ಕಲಬುರಗಿ: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಚಿತ್ತಾಪುರದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶಾಂತಿ ಸಭೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಶಾಂತಿ ಸಭೆಗೆ ಸಜ್ಜಾಗಿದೆ.
ಆರೆಸ್ಸೆಸ್, ದಲಿತ ಪ್ಯಾಂಥರ್ಸ್, ಭೀಮ್ ಆರ್ಮಿ, ಗೊಂಡ ಕುರುಬ ಎಸ್‌ಸಿ ಎಸ್‌ಟಿ ಸೇರ್ಪಡೆ ಹೋರಾಟ ಸಮಿತಿ ಸೇರಿದಂತೆ 8 ಸಂಘಟನೆಗಳು ನ.2 ರಂದೇ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿವೆ.
ಈ ವಿವಾದ ನ್ಯಾಯಲಯದ ಮುಂದಿದ್ದು, ಇಂದು ಎಲ್ಲಾ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಿ ಅ.30 ರಂದು ವರದಿ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿರುವ ಹೈಕೋರ್ಟ್, ವಿವಾದಕ್ಕೆ ತೆರೆನೀಡಲು ಅ.28 ರಂದು ಎಲ್ಲಾ ಸಂಘಟನೆಗಳೊಂದಿಗೆ ಶಾಂತಿ ಸಭೆ ನಡೆಸಿ ವರದಿ ಕೇಳಿದೆ.