×
Ad

ಕಲಬುರಗಿ | ಶಂಕರಲಿಂಗನ ಗುಡಿ ಶಾಲೆಯಲ್ಲಿ ಬೇಸಿಗೆ ಶಿಬಿರದ‌ ಸಮಾರೋಪ

Update: 2025-05-18 17:11 IST

ಕಲಬುರಗಿ : ಜಿಲ್ಲೆಯ ಶಹಾಬಾದ್‌ ಪಟ್ಟಣದ ಹಳೇ ಶಹಾಬಾದ್‌ ಶಂಕರಲಿಂಗನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಶೋಕ್ ಲೀಲ್ಯಾಂಡ್-ಲರ್ನಿಂಗ್ ಲಿಂಕ್ಸ್ ಫೌಂಡೇಷನ್ (AL-LLF-RTS) ವತಿಯಿಂದ ಬೇಸಿಗೆ ಶಿಬಿರದ ಸಮಾರೋಪ‌ ಸಮಾರಂಭ ಶನಿವಾರ ಜರುಗಿತ್ತು.

ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶರಣಗೌಡ ಪಾಟೀಲ್ ಮಾತನಾಡಿ, ಬೇಸಿಗೆ ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಚಟುವಟಿಕೆ ಹೊರಹೊಮ್ಮಲು ಈ ವೇದಿಕೆ ಅವಕಾಶ ಕಲ್ಪಿಸಿದೆ. ಪರಸ್ಪರ ಸಹಬಾಳ್ವೆ, ಪ್ರೀತಿ ವಿಶ್ವಾಸದಿಂದ ಸಾಗುವುದನ್ನು ಶಿಬಿರ ಹೇಳಿಕೊಡಲಿದ್ದು, ಮಕ್ಕಳ ಮುಂದಿನ ವಿಧ್ಯಾಬ್ಯಾಸಕ್ಕೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಕರಾದ ಭಾಗ್ಯಶ್ರೀ ಮತ್ತು ಸುರೇಖಾ ಅವರು ಬೇಸಿಗೆ ಶಿಬಿರದ ಮಹತ್ವದ ಕುರಿತು ವಿವರಣೆ ನೀಡಿದರು.‌ ಇನ್ನು ಮಕ್ಕಳು ಬೇಸಿಗೆ ಶಿಬಿರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರನ್ನು ಸಬಲೀಕರಣಗೊಳಿಸುವ ಮತ್ತು ಶಿಕ್ಷಣವನ್ನು ಸುಧಾರಿಸುವ ಗುರಿಯನ್ನು ಅಶೋಕ್ ಲೇಲ್ಯಾಂಡ್ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ - ರೋಡ್ ಟು ಸ್ಕೂಲ್ ಕಾರ್ಯಕ್ರಮ ಹೊಂದಿದೆ. ಈ ಕಾರ್ಯಕ್ರಮವು ಬೋಧನೆ, ಯೋಗಕ್ಷೇಮ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಕಲಿಕೆಯ ವಿವಿಧ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ.

ಸಮಾರೋಪ‌ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶರಣಗೌಡ ಪಾಟೀಲ್, ಸಿದ್ದಾರ್ಥ್ ಮತ್ತು ಪಾಲಕರಾದ ಮಡಿವಾಳಪ್ಪ ಸೇರಿದಂತೆ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News