×
Ad

ಕಲಬುರಗಿ | ಆ್ಯಪ್‍ಗಳಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಗಣತಿ ಕಾರ್ಯಕೈಗೊಳ್ಳಿ: ಜಿಲ್ಲಾಧಿಕಾರಿ

Update: 2025-06-20 21:49 IST

ಕಲಬುರಗಿ: ಏಳನೆಯ ಸಣ್ಣ ನೀರಾವರಿ ಮತ್ತು ಎರಡನೇಯ ನೀರಿನಾಸರೆಗಳ ಗಣತಿಗಳ ಕಾರ್ಯವನ್ನು ಸಂಪೂರ್ಣ ಮಾಹಿತಿಯೊಂದಿಗೆ ಡಿಜಿಟಲ್ ಮೋಡ್ ಮೊಬೈಲ್ ಆ್ಯಪ್‍ಗಳಲ್ಲಿ ಕೈಗೊಳ್ಳಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರುನ್ನುಮ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏಳನೇಯ ಸಣ್ಣ ನೀರಾವರಿ ಮತ್ತು ಎರಡನೇಯ ನೀರಿನಾಸರೆಗಳ ಗಣತಿಗಳು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣತಿ ಕಾರ್ಯ ಮಾಡುವ ವಿಧಾನದ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ತಾಲ್ಲೂಕು ಮಟ್ಟದ ಮೇಲ್ವಿಚಾರಕರು, ತಹಶೀಲ್ದಾರರು ಹಾಗೂ ಸಾಂಖ್ಯಿಕ ನಿರೀಕ್ಷಕರು ನಿಯಮಿತವಾಗಿ ಕ್ಷೇತ್ರ ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಣತಿಯ ಮೇಲ್ವಿಚಾರಣೆ ಮತ್ತು ದತ್ತಾಂಶಗಳ ಪರಿಶೀಲನೆ ಕಾರ್ಯವನ್ನು ವೆಬ್ ಪೋರ್ಟಲ್ ಮೂಲಕ ಕಾರ್ಯನಿರ್ವಹಿಸಿ ಏಳನೆಯ ಸಣ್ಣ ನೀರಾವರಿ ಮತ್ತು 2ನೆಯ ನೀರಿನಾಸರೆಗಳ ಗಣತಿಗಳ ಕಾರ್ಯದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ನೀಡಬೇಕು ಎಂದರು.

ಗ್ರಾಮದ ಎಲ್ಲಾ ಯೋಜನೆಗಳ ವಿವರ ಮತ್ತು ಗ್ರಾಮದ ಇತರೇ ವಿವರಗಳು ಸಂಪೂರ್ಣವಾಗಿ ಪತ್ರದಲ್ಲಿ ನಮೂದಾಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಕಾರ್ಯಕರ್ತರನ್ನಾಗಿ ತರಬೇತಿ ನೀಡಿ ಆದೇಶಸಲು ಸಣ್ಣ ನೀರಾವರಿ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಯಶ್ರೀ ಕರ್ಜಗಿ, ಕಾರ್ಯನಿರ್ವಾಹಕ ಅಭಿಯಂತರರು ನಾಗಣ್ಣ ಬಾವಿ, ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರುಗಳು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News